ದೇಶಕ್ಕಾಗಿ ಶ್ರಮಿಸುತ್ತಿರುವ ಯೋಧರ ಸೇವೆ ಅನನ್ಯ

3ard01
 ಸೇವಾ ನಿವೃತ್ತಿ ಹೊಂದಿ ಔರಾದ್ ತಾಲೂಕಿನ ಜೀರ್ಗಾ(ಬಿ) ಗ್ರಾಮಕ್ಕೆ ಆಗಮಿಸಿದ ಸಿಆರ್‌ಪಿಎಫ್ ಯೋಧ ರವೀಂದ್ರ ಕೊಡಗೆ ದಂಪತಿಯನ್ನು ಭಾನುವಾರ ಗ್ರಾಮಸ್ಥರು ಸನ್ಮಾನಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ದಾರುಕಲಿಂಗ ಶಿವಾರ್ಚಾರ್ಯರು, ಸಿಪಿಐ ರಘವೀರಸಿಂಗ ಠಾಕೂರ್, ಸಂಜುಕುಮಾರ ಜುಮ್ಮಾ, ಶಿವಕುಮಾರ ಘಾಟೆ , ರಾಜಕುಮಾರ ಲದ್ದೆ , ಶರಣಯ್ಯ ಸ್ವಾಮಿ, ಸಂತೋಷ, ನಾಗರಾಜ, ಪರಮೇಶ್ವರ, ಮಹಾದೇವ ಕೋಟೆ, ಮಾರುತಿ ಗಾದಗೆ ಇತರರಿದ್ದರು.
Published on

ಔರಾದ್: ಯೋಧರು -೦ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ತನ್ನ ಎಲ್ಲ ಬೇಕು ಬೇಡಗಳನ್ನು ತ್ಯಾಗ ಮಾಡಿ ದೇಶದ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರ ಸೇವೆ ಅನನ್ಯವಾಗಿದೆ ಎಂದು ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ತಾಲೂಕಿನ ಜೀರ್ಗಾ (ಬಿ ) ಗ್ರಾಮದ ಯೋಧ ರವೀಂದ್ರ ಕೊಡಗೆ ಅವರು ಕೋಬ್ರಾ ಕಮಾಂಡೋ ಯೋಧ ವೃತ್ತಿ ಮುಗಿಸಿ ಹುಟ್ಟೂರಿಗೆ ಆಗಮಿಸಿದ ಪ್ರಯುಕ್ತ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ದಿವ್ಯ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಗಡಿಯಲ್ಲಿ ಸೈನಿಕರು ಹಗಲಿರುಳು ಸೇವೆ ಸಲ್ಲಿಸುತ್ತಿರುವುದರಿಂದ ನಾವುಗಳು ನಮ್ಮ ನಮ್ಮ ಮನೆಗಳಲ್ಲಿ ಸುಖವಾಗಿ ನಿದ್ರೆ ಮಾಡುತ್ತಿದ್ದೇವೆ. ಅನೇಕರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯಸಿಕ್ಕಿದೆ. ಒರ್ವ ಹೆಣ್ಣು ಮಗಳು ಅರ್ಧ ರಾತ್ರಿಯಲ್ಲಿ ಸುರಕ್ಷತೆಯಿಂದ ಮನೆಗೆ ಹೋದಾಗ ಮಾತ್ರ ಗಾಂಧೀಜಿಯವರು ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದು ಹೇಳಿದರು.

ಹೆಡಗಾಪುರದ ಶ್ರೀ ದಾರುಕಲಿಂಗ ಶಿವಾರ್ಚಾರ್ಯರು ಮಾತನಾಡಿ, ದೇಶದ ರಕ್ಷಣೆಗಾಗಿ ತನ್ನ ಕುಡಿಯನ್ನು ಕೊಟ್ಟ ಯೋಧನ ಹೆತ್ತವರ ಮತ್ತು ಮಡದಿಯ ತ್ಯಾಗ ದೊಡ್ಡದು. ನಮ್ಮ ನೆಮ್ಮದಿ ಬದುಕಿಗಾಗಿ ಯೋಧರು ಗಡಿಯಲ್ಲಿ ಹೋರಾಡುತ್ತಾರೆ ಎಂದು ಬಣ್ಣಿಸಿದರು.

ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿದರು. ಯೋಧ ರವೀಂದ್ರ ಕೊಡಗೆ ದಂಪತಿಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ತೆರದ ವಾಹನದಲ್ಲಿ ಭವ್ಯ ಮೆರವಣಿಗೆ ಮಾಡಿದರು. ಯುವಕರು ರಾಷ್ಟ್ರ ಧ್ವಜ ಹಿಡಿದು, ಜಯಘೋಷಗಳ ಮೂಲಕ ಬೈಕ್ ರ‍್ಯಾಲಿ ನಡೆಸಿದರು.

ಗ್ರಾಮದ ಹಿರಿಯ ಸಂಗಪ್ಪ ದೇಗಲವಾಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ, ಪಿಕೆಪಿಎಸ್ ಅಧ್ಯಕ್ಷ ಬಸಯ್ಯ ಸ್ವಾಮಿ, ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜುಕುಮಾರ ಜುಮ್ಮಾ, ಶಿವಾನಂದ ಮೊಕ್ತೇದಾರ, ಪಂಡಿತ ಬಂಬುಳಗೆ, ರಾಜಕುಮಾರ ಪಾಟೀಲ್, ಸದಾನಂದ ಕೋಟೆ, ಚನ್ನಪ್ಪ, ಸಚಿನ ಕೊಡಗೆ, ಪರಮೇಶ್ವರ ಬಾಂಬುಳಗೆ, ಪ್ರವೀಣ ಸ್ವಾಮಿ, ನೀಲಕಂಠ, ಅಮರನಾಥ, ಶಿವು ಪಾಟೀಲ್, ಶರಣಪ್ಪ ಬೇಳೂರೆ, ಶಿವಕುಮಾರ ಬಾವುಗೆ, ಶಿವಾನಂದ, ವಿಜಯಕುಮಾರ ಪಾಟೀಲ್ ಇತರರಿದ್ದರು. ಶಿವಾನಂದ ಕೋಟೆ ಸ್ವಾಗತಿಸಿದರು. ನಾಗರಾಜ ಬಂಬುಳಗೆ ನಿರೂಪಣೆ ಮಾಡಿದರು.

ದೆಹಲಿ, ಜಮ್ಮು-ಕಾಶ್ಮೀರ, ಬಿಹಾರ, ಹೈದರಾಬಾದ್, ಬಾನಾಘಾಟ, ಛತ್ತೀಸಘಡ್, ಜಾರ್ಖಂಡ್ ನಂತರ ಜಂಗಲï ಕೋಬ್ರಾ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ್ದು, ಇಂದು ತಾವು ನೀಡಿದ ಗೌರವಕ್ಕೆ ನಾನು ಚಿರಋಣಿಯಾಗಿದ್ದಾನೆ. ಮತ್ತೇ ದೇಶಕ್ಕಾಗಿ ಅಗತ್ಯ ಎನಿಸಿದರೆ ಯಾವುದೇ  ಕ್ಷಣದಲ್ಲೂ ದುಡಿಯಲು ಸಿದ್ಧ.

| ರವೀಂದ್ರ ಕೊಡಗೆ, ನಿವೃತ್ತ ಯೋಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net