ದೇಶಕ್ಕಾಗಿ ಮಧ್ಯಸ್ಥಿಕೆ ಆಂದೋಲನ ಆರಂಭ

4Rayabag1
Published on

ರಾಯಬಾಗ: ನ್ಯಾಯಾಲಯದಲ್ಲಿರುವ ಪಕ್ಷಗಾರರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಜು.೧ರಿಂದ ಅಕ್ಟೋಬರ್ ೭ರ ವರೆಗೆ `ದೇಶಕ್ಕಾಗಿ ಮಧ್ಯಸ್ಥಿಕೆ' ಎಂಬ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.

ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆದೇಶದ ಮೇರೆಗೆ ನ್ಯಾಯಾಲಯಗಳಲ್ಲಿ ೯೦ ದಿನಗಳವರೆಗೆ ಈ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪಕ್ಷಗಾರರು ಮತ್ತು ವಕೀಲರು ತಮ್ಮ ಪ್ರಕರಣಗಳನ್ನು ಮಧ್ಯಸ್ಥಗಾರರ ಮೂಲಕ ಬಗೆ ಹರಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಇದರಿಂದ ಪ್ರಕರಣಗಳು ಶೀಘ್ರ ವಿಲೇವಾರಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಮಧ್ಯಸ್ಥಗಾರರಾದ ವಿ.ಜಿ.ಖವಟಕೊಪ್ಪ, ಎನ್.ಎಂ.ಯಡವನ್ನವರ, ಎಂ.ಕೆ.ಕೊಂಬಾರೆ, ವಿ.ಎ.ಮೊರೆ, ವಕೀಲರಾದ ಕೆ.ಎಸ್.ಪುಂಡಿಪಲ್ಲೆ, ಎಸ್.ಎಸ್.ನಾಯಿಕ, ಎ.ಬಿ.ಪಡೋಲಕರ, ಎನ್.ಎಸ್.ಒಡೆಯರ, ಎಸ್.ಎಂ.ಕಳ್ಳೆ, ಆರ್.ಎಸ್.ಹೊಳೆಪ್ಪಗೋಳ, ಪಿ.ಆರ್.ಕಡಟ್ಟಿ, ಎಂ.ಎಂ.ಕೋಟಿವಾಲೆ, ಕೆ.ಎಲ್.ಕೆರೂರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net