ದೇಶ ಸೇವೆ ಸರ್ವ ಶ್ರೇಷ್ಠ

Akka Mahadevi College Photo
Published on

ಬೀದರ್: ದೇಶ ಸೇವೆ ಸರ್ವ ಶ್ರೇಷ್ಠವಾದದ್ದು ಎಂದು ಪ್ರಾಚಾರ್ಯ ಪ್ರೊ. ವಿಜಯಕುಮಾರ ಬಿರಾದಾರ ನುಡಿದರು.

ನಗರದ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು, ಯುವಕರು ದೇಶಕ್ಕೆ ಏನಾದರೂ ಕೊಡುಗೆ ನೀಡಲು ಸಂಕಲ್ಪ ತೊಡಬೇಕು ಎಂದು ತಿಳಿಸಿದರು.

ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ. ಲೀಲಾವತಿ ಚಾಕೋತೆ, ಪ್ರೊ. ಶಿವನಾಥ ಪಾಟೀಲ, ಪ್ರೊ. ಶಿವಶರಣಪ್ಪ ಚಿಟ್ಟಾ, ಪ್ರೊ. ಸಂಗ್ರಾಮ ಎಂಗಳೆ, ಡಾ. ಗಂಗಾಂಬಿಕೆ ಪಾಟೀಲ, ಡಾ. ಧನಲಕ್ಷ್ಮಿ ಪಾಟೀಲ, ಡಾ. ವಿಶ್ವನಾಥ ಕಿವುಡೆ, ಡಾ. ಓಂಕಾರ ಖಂಡ್ರೆ, ಶರಣಪ್ಪ ಡಿ, ಕವಿತಾ, ಡಾ. ದೇವರಾಜ, ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಕಾಂತ ಪಾಟೀಲ, ಬಿ.ಎಡ್. ಕಾಲೇಜು ಪ್ರಾಚಾರ್ಯ ಸಂತೋಷ, ಕಿರಿಯ ಆಡಳಿತಾಧಿಕಾರಿ ಪೀಟರ್, ಲೆಕ್ಕಾಧಿಕಾರಿ ಬಸವರಾಜ ಇದ್ದರು.

ಕಬಡ್ಡಿ, ವಾಲಿಬಾಲ್, ಓಟ, ಥ್ರೋಬಾಲ್, ಭಾಷಣ, ನಿಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net