ದೇಶ ಸೇವೆ ನಮ್ಮೆಲ್ಲರ ಹೊಣೆ

23 hbd 03
Published on

ಚಿಟಗುಪ್ಪ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾಣಿಕೆ ನೀಡುವುದು, ದೇಶ ರಕ್ಷಣೆ ಮಾಡುವುದೇ ನಿಜವಾದ ದೇಶ ಪ್ರೇಮ, ಸೇವೆ ಎಂದು ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಹಾಗೂ ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ನನ್ನ ಮಣ್ಣು, ನನ್ನ ದೇಶ ಸಮಾರಂಭದಲ್ಲಿ ಮಾತನಾಡಿ, ತಾಯಿ ಭಾರತಾಂಬೆಯ ಋಣ ತೀರಿಸಲು ಸರ್ವರೂ ಕಂಕಣಬದ್ಧರಾಗಬೇಕು. ದೇಶದ ಮೇಲೆ ಪ್ರತಿಯೊಬ್ಬರಿಗೂ ಅಭಿಮಾನ, ಗೌರವ, ಪ್ರೀತಿ ಸದಾ ಕಾಲ ಇರಬೇಕು ಎಂದರು. ವಿನ ಪರಿಷತ್ತು ಸದಸ್ಯ ಮಹಾರುದ್ರಪ್ಪ ಅಣದೂರೆ, ಸಂಗಮೇಶ, ಡಾ.ಸುರೇಂದ್ರ ಸಿಂಗ್, ಉಪನ್ಯಾಸಕ ಡಾ.ವೀರಶೆಟ್ಟಿ ಮೈಲೂರಕರ, ಡಾ.ಸತೀಶ ಡೊಂಗರೆ, ಮಲ್ಲಿಕಾರ್ಜುನ ತಿರ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net