ದೇಶ, ಸಂಸತಿಗೆ ದ್ರೋಹಿಯಾಗಬೇಡಿ

21_01
Published on

ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ವಾಗ್ಮಿ ಹಿರೇಮಗಳೂರು ಕಣ್ಣನ್​ ಕರೆ

ತುಮಕೂರು: ನಾಡು, ನೆಲ, ಸಂಸತಿ, ಭಾಷೆ, ದೇಶ ಮರೆತರೆ ಅದಕ್ಕಿಂತ ದೊಡ್ಡ ದೇಶ ದ್ರೋಹ ಮತ್ತೊಂದಿಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್​ ಹೇಳಿದರು.

ನಗರದ ತುಮಕೂರು ವಿಶ್ವವಿದ್ಯಾಲಯದ ಪ್ರೇರಣಾ ಉಪನ್ಯಾಸ ಮಾಲೆಯ ಅಂಗವಾಗಿ ಸೋಮವಾರ

"ಭಾಷೆ, ಸಂಸತಿ ಮತ್ತು ಯುವಜನತೆ' ಕುರಿತು ಮಾತನಾಡಿದ ಅವರು, ದೇಶ ಹಾಗೂ ಸಂಸತಿಗೆ ದ್ರೋಹಿಯಾಗಿ ಬದುಕುವುದಕ್ಕಿಂತ ದೇಹಿಯಾಗಿ ಬದುಕುವುದೇ ಲೇಸು ಎಂದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಶಯವನ್ನು ಅರ್ಥಮಾಡಿಕೊಂಡು ವಿಶ್ವಮಾನವತೆಯನ್ನು ರೂಢಿಸಿಕೊಳ್ಳಬೇಕು. ವಿಜ್ಞಾನಿ ಬುದ್ಧಿ, ತತ್ವಜ್ಞಾನಿ ಮನಸ್ಸು ಹಾಗೂ ಕವಿ ಹೃದಯ ಬೆಳೆಸಿಕೊಂಡರೆ ಬದುಕು ಹಸನಾಗುತ್ತದೆ. ತಾಯಿ, ತಾಯ್ನಾಡು, ತಂದೆ, ತಾಯ್ನುಡಿ- ಈ ನಾಲ್ಕನ್ನು ಜೀವನದಲ್ಲಿ ಮರೆಯಬೇಡಿ. ತಂದೆ&ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಸತಿ ಯುವಜನಾಂಗದ್ದು ಆಗಬಾರದು. ಸಾಧಕರ ಜೀವನ ಚರಿತ್ರೆಗಳನ್ನು ಓದಿ ಅದರಿಂದ ಪ್ರೇರಣೆ ಪಡೆಯುವುದನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬೀಗುವುದು ಬದುಕಲ್ಲ, ಬಾಗುವುದು ಬದುಕು. ನಾವು ಬಾಳೆಯಂತೆ ಬಾಗಬೇಕು. ಭಾಷೆ ಸಂವಹನಕ್ಕೆ ತೊಡಕಾಗಬಾರದು. ಭಾಷೆಗಿಂತ ಭಾವನೆ ಮುಖ್ಯ. ಅನುಕಂಪ, ಕಾಳಜಿ, ಪ್ರೀತಿ ಮತ್ತು ಸಹಕಾರ ನಮ್ಮ ಬದುಕಿನ ಧ್ಯೇಯವಾಗಬೇಕು ಎಂದರು.

ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ಮಹಾರಾಜ್​ ಮಾತನಾಡಿ, ಕನ್ನಡ ಮಾತನಾಡಲು ಕಷ್ಟಪಡುವ ನಾವು ನವೆಂಬರ್​ ಕನ್ನಡಿಗರಾಗಿದ್ದೇವೆ. ಮೊದಲು ನಮ್ಮ ದೇಶವನ್ನು ಪ್ರೀತಿಸಬೇಕು. ರಾಷ್ಟ್ರೀಯತೆ, ಜೀವನ, ಧರ್ಮದ ಮೂಲಗಳನ್ನು ಅರಿಯಬೇಕು. ವಿವೇಕಾನಂದರ ವಿಚಾರಗಳಿಂದ ಎಷ್ಟೋ ಜನ ಭಾರತದ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ವಿವೇಕಾನಂದರ ಧ್ಯೇಯಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಭವ್ಯ ಭಾರತದ ನಿಮಾರ್ಣವಾಗುತ್ತದೆ ಎಂದು ಹೇಳಿದರು.

ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸುವ ಉದ್ದೇಶದಿಂದ ಪ್ರೇರಣಾ ಉಪನ್ಯಾಸ ಮಾಲೆಯನ್ನು ಆರಂಭಿಸಲಾಗಿದೆ. ಅಂಕ ಮತ್ತು ಪದವಿಗಳಿಂದ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ನಿಷ್ಠೆಯಿಂದ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದ ಜಮ್​ ಜಮ್​, ಮೌಲ್ಯಮಾಪನ

ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್​, ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ.ಬಿ.ರವೀಂದ್ರ ಕುಮಾರ್​ ಉಪಸ್ಥಿತರಿದ್ದರು. ಡಾ. ಕೆ.ವಿ.ಸಿಬಂತಿ ಪದ್ಮನಾಭ ನಿರೂಪಿಸಿದರು.

ಡಾ. ಅರುಣ್​ ಕುಮಾರ್​ ವಂದಿಸಿದರು.

ಸಾವಿನ ದಿನಾಂಕವು ಇರುವುದಿಲ್ಲ

ಗತ್ತಿನ ಎಲ್ಲ ದೇಶಗಳ ಹುಟ್ಟಿದ ದಿನಾಂಕವನ್ನು ಗುರುತಿಸಲು ಸಾಧ್ಯವಿದೆ. ಆದರೆ, ಭಾರತಕ್ಕೆ ಮಾತ್ರ ಹುಟ್ಟಿನ ದಿನಾಂಕವಿಲ್ಲ. ಯಾವ ದೇಶಕ್ಕೆ ಹುಟ್ಟಿನ ದಿನಾಂಕವಿರುವುದಿಲ್ಲವೋ ಆ ದೇಶಕ್ಕೆ ಸಾವಿನ ದಿನಾಂಕವು ಇರುವುದಿಲ್ಲ. ಸನಾತನ ಭಾರತಕ್ಕೆ ಅಷ್ಟು ಆಳವಾದ ಇತಿಹಾಸವಿದೆ.

| ಹಿರೇಮಗಳೂರು ಕಣ್ಣನ್​ ವಾಗ್ಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net