ದೇಶ ವಿಶ್ವ ಗುರುವನ್ನಾಗಿಸಲು ಶ್ರಮ

jyp pooja
ಬಸರೀಕಟ್ಟೆ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಮಣಿಕಂಠನ್ ಕಂದಸ್ವಾಮಿ, ಸುಧೀಂದ್ರ, ಧರ್ಮರಾಜ್ ಇತರರಿದ್ದರು.
Published on

ಜಯಪುರ: ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ನರೇಂದ್ರ ಮೋದಿ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು.

ಬಸರೀಕಟ್ಟೆಯಲ್ಲಿ ಆಯೋಜಿಸಿದ್ದ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ ಮೂಲಕ ತಂತ್ರಜ್ಞಾನ ಮತ್ತು ಉದ್ಯೋಗ ಯೋಜನೆಗಳ ಅಭಿವೃದ್ಧಿ, ಯುವಜನತೆಗೆ ಉದ್ಯೋಗ ಯೋಜನೆಗಳು, ರೈತ ವರ್ಗ, ಶೈಕ್ಷಣಿಕ ಯೋಜನೆ, ನಗಾರಭಿವೃದ್ಧಿ ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು. ಬಸರೀಕಟ್ಟೆ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ಮಹಾಪೂಜೆ ನೆರವೇರಿಸಲಾಯಿತು. ಬಸರೀಕಟ್ಟೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಬಿಜೆಪಿ ಮುಖಂಡರಾದ ಧರ್ಮರಾಜ್, ಸೀತೆಗೌಡ, ಪದ್ಮನಾಭ, ಸುದರ್ಶನ ಶೆಟ್ಟಿ , ಕೃಷ್ಣ, ಸುರೇಂದ್ರ, ಸಂತೋಷ್, ಅನಿಲ, ಶೇಷಯ್ಯ ಭರಕನಘಟ್ಟ, ಅದ್ರಾಮ್, ಸುರೇಶ್, ಪಯ್ಯಣ್ಣ ಆಟೋ ಬಳಗದವರು, ಮೇರುತಿ ಗೋಪ್ರೇಮಿ ಬಳಗದ ಅಧ್ಯಕ್ಷ ಸುಧೀಂದ್ರ ಮಲ್ಲಂಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net