ದೇಶ ರಕ್ಷಕ ಪಡೆಯಿಂದ ವಿಶ್ವ ರಕ್ತದಾನಿಗಳ ದಿನ ಆಚರಣೆ

National Guard celebrates World Blood Donor Day
ವಿಜಯಪುರದ ರಕ್ತ ನಿಧಿ ಕೇಂದ್ರದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತ ದಾನ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರೋಹನ್​ ಆಪ್ಟೆ, ವಿಕ್ರಮ ತಾಂಬೆಕರ, ಜಗದೀಶ ರೂಗಿಮಠ, ಆಕಾಶ ಇಂಡಿ ಮತ್ತಿತರರಿದ್ದಾರೆ.
Published on

ವಿಜಯಪುರ : ನಗರದ ವಿಜಯಪುರ ರಕ್ತ ನಿಧಿ ಕೇಂದ್ರದಲ್ಲಿ ದೇಶ ರಕ್ಷಕ ಪಡೆ ಸಂಚಾಲಿತ ಆಕಾಶ ರಕ್ತ ಸಹಾಯವಾಣಿ ವತಿಯಿಂದ ಶನಿವಾರ ರಕ್ತ ದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಯಿತು.

ದೇಶ ರಕ್ಷಕ ಪಡೆ ಸಂಸ್ಥಾಪಕ ರೋಹನ್​ ಆಪ್ಟೆ ಮಾತನಾಡಿ, ನಮ್ಮ ಸಂಟಣೆಯ ಪ್ರತಿಯೊಬ್ಬ ಕಾರ್ಯಕರ್ತರು ಕಳೆದ 5 ವರ್ಷಗಳಿಂದ ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ರಕ್ತದ ಅಗತ್ಯವಿದ್ದವರಿಗೆ ಆಸರೆಯಾಗಿದ್ದಾರೆ. ರಾಜ್ಯವಲ್ಲದೇ, ನೆರೆಯ ಮಹಾರಾಷ್ಟ್ರ ಹಾಗೂ ಹೈದರಾಬಾದ್​ ಸೇರಿದಂತೆ ಒಟ್ಟು 4600 ಕ್ಕೂ ಅಧಿಕ ಜನರಿಗೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತದಾನ ಮಾಡಲಾಗಿದೆ. ಸಾರ್ವಜನಿಕರು ರಕ್ತದಾನದ ಮಹತ್ವ ಅರಿತು ಮುಂಬರುವ ದಿನದಲ್ಲಿ ತಾವು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾಶ ರಕ್ತ ಸಹಾಯವಾಣಿ ಅಧ್ಯ ವಿಕ್ರಮ ತಾಂಬೆಕರ, ದೇಶ ರಕರ ಪಡೆ ಪ್ರಧಾನ ಕಾರ್ಯದರ್ಶಿ ಜಗದೀಶ ರೂಗಿಮಠ ಹಾಗೂ ಅಧ್ಯಕ್ಷ ಆಕಾಶ ಇಂಡಿ ಮಾತನಾಡಿದರು.

ಸದಸ್ಯರಾದ ಕಿರಣ ಕೋಳುರಗಿ, ಶಿವಾನಂದ ತುಪ್ಪದ, ವಿನೋದ ಪತ್ತಾರ, ಆದಿತ್ಯ ಬಡಿಗೇರ, ಅಭಯ ಹದನುರ, ಆದಿತ್ಯ ಹಳ್ಳಿ, ರಾವೇಂದ್ರ ಮಿರೇಕರ, ಸಾಗರ ಭಜಂತ್ರಿ, ಪವನ ಶರ್ಮಾ, ಪ್ರಸನ್ನ ಗಣಿಯಾರ, ಕೃಷ್ಣಾ ಮಾಯಾಚಾರಿ, ವಿವೇಕ ತಾವರಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net