ದೇಶ ಮೌಢ್ಯದಲ್ಲಿ ಮುಂದಿದೆ,ಯಾದವರೆಡ್ಡಿ ವಿಷಾದ

PHOTO-2 (1)--05
Published on


ಚಿತ್ರದುರ್ಗ: ಮೌಢ್ಯಗಳನ್ನು ಪ್ರಶ್ನಿಸುವವರೆಗೆ ದುರ್ಗತಿ ಕಾದಿರುತ್ತದೆ ಎನ್ನುವ ಸಂದೇಶವನ್ನು ದುಷ್ಟ ಶಕ್ತಿಗಳು ಹಿಂದಿನಿಂದಲೂ ಸಾರುತ್ತಾ ಬಂದಿವೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನದ ಅಂಗವಾಗಿ ಸೋಮವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ದೇಶ ಮೌಢ್ಯದಲ್ಲಿ ಮುಂದಿದೆ ಎಂ ದು ವಿಷಾದಿಸಿದರು.
ಬುದ್ದ,ಬಸವ,ಡಾ.ಬಿ.ಆರ್.ಅಂಬೇಡ್ಕರ್ ಮೊದಲಾದ ದಾರ್ಶನಿಕರು,ವಿಚಾರವಂತರು ಮೂಢನಂಬಿಕೆಗಳ ವಿರುದ್ಧ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಅನೇಕರು ಈ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ,ಶಿಕ್ಷಣದೊಂದಿಗೆ ವೈಜ್ಞಾನಿಕ ನೆಲೆಯಲ್ಲಿ ಜೀವನವನ್ನು ಕಟ್ಟಿಕೊಳ್ಳಬೇಕಿದೆ ಎಂ ದರು. ಪ್ರಾಚಾರ‌್ಯ ಪ್ರೊ.ಸಿದ್ರಾಮ ಚನಗೊಂಡ ಅಧ್ಯಕ್ಷತೆ ವಹಿಸಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್ ಡಿ.ಸಸ್ಯಶಾ ಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಎನ್.ಸುಧಾಮ,ಕೇಂದ್ರದ ಖಜಾಂಚಿ ಕೆ.ರಾಮಪ್ಪ,ಸದಸ್ಯರಾದ ಎಂ.ಬಿ.ಜಯದೇವಮೂರ್ತಿ,ಮನೋ ಹರ್ ಇದ್ದರು.
(ಸಿಟಿಡಿ 21ಯಾದವರೆಡ್ಡಿ ಮಗ್‌ಶಾಟ್ ಇದ್ದರೆ ಬಳಸಿ- ಕಾರ‌್ಯಕ್ರಮದ ಪೋಟೊ ಕ್ವಾಲಿಟಿ ಸರಿ ಇಲ್ಲ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net