

ಚಿತ್ರದುರ್ಗ: ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ದೇಶ ಭಕ್ತರನ್ನು ಎಂದಿಗೂ ಮರೆಯಬಾರದು ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂಭಾಗ ಗುರುವಾರ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಗಾಂಧಿ ಅವರ ತತ್ವಾದರ್ಶ ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ನಂತರ ಜನಿಸಿದವರು. ಅದರ ಪೂರ್ವದ ಇತಿಹಾಸ, ದೇಶ ಹೇಗಿತ್ತೆಂಬ ಮಾಹಿತಿ ಅವರಿಗೆ ತಿಳಿದಿಲ್ಲ. ಆಗಿನ ಪರಿಸ್ಥಿತಿ ಅವಲೋಕಿಸಿ, ಆ ಆಧಾರದ ಮೇಲೆ ಸಂವಿಧಾನ ತಯಾರಾಯಿತು. ಭಾರತ ಹಿಂದು ರಾಷ್ಟ್ರವಲ್ಲ. ಇಲ್ಲಿ ಎಲ್ಲ ಧರ್ಮೀಯರಿದ್ದಾರೆ. ಒಟ್ಟಾಗಿ ಬಾಳುತ್ತಿದ್ದು, ಆ ಭಾವನೆ ಎಂದಿಗೂ ಕಡಿಮೆಯಾಗದಂತೆ ಕಾಂಗ್ರೆಸ್ಸಿಗರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಪದಾಧಿಕಾರಿಗಳಾದ ಹಾಲಸ್ವಾಮಿ, ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಶಿವಣ್ಣ, ಮುದಾಸಿರ್, ಜಯಣ್ಣ, ರವಿಕುಮಾರ್, ಖಾಸಿಂ ಆಲಿ, ಪೈಲ್ವಾನ್ ತಿಪ್ಪೇಸ್ವಾಮಿ, ಪ್ರಕಾಶ್, ಶಶಾಂಕ್, ಖುದ್ದೂಸ್, ಲೋಕೇಶ್ ಇತರರಿದ್ದರು.