

ಯಾದಗಿರಿ: ದೇಶದ ನಿರ್ಮಾಣದಲ್ಲಿ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದರು.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ನಿಮಿತ್ತ ಶಕ್ರವಾರ ನಗರದ ಎನ್ವಿಎಂ ಹೋಟೆಲ್ ಸಭಾಂಗಣದಲ್ಲಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿಂದ ಹಮ್ಮಿಕೊಳ್ಳಲಾಗಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರ್ಗಳು ಹೊಸಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ನಾಗರಿಕತೆ ಬೆಳೆದಂತೆಲ್ಲ ಮನುಷ್ಯನ ಬದುಕು ಕೂಡ ವೈಶಿಷ್ಟ್ಯ ಪೂರ್ಣವಾಗುತ್ತಿದೆ.
ಆತನ ಇಚ್ಛೆಗೆ ತಕ್ಕಂತೆ ಕಟ್ಟಡಗಳನ್ನು ವಿನ್ಯಾಸಗೊಳಿಸುವಲ್ಲಿ ಇಂಜನಿಯರ್ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಕಲ್ಪನೆಗೂ ಎಟುಕದಂತೆ ಕಟ್ಟಡಗಳನ್ನು ವಿನ್ಯಾಸಗೊಳಿಸಿ, ಅವುಗಳಿಗೆ ಜೀವ ತುಂಬುವ ಅಭಿಯಂತರರ ಸೇವೆ ಈ ನಾಡಿಗೆ ಇನ್ನೂ ಹೆಚ್ಚು ಬೇಕಿದೆ ಎಂದು ಹೇಳಿದರು. ಅಸೋಸಿಯೇಷನ್ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ಆಣೆಕಟ್ಟು ಮುಂದಾದಾಗ ಆಗಿನ ಮದ್ರಾಸ್ ಸಕರ್ಾರ ಒಪ್ಪಿಗೆ ಕೊಡಲಿಲ್ಲ. ಆದರೂ ಅವರು ತಮ್ಮ ಛಲ ಬಿಡದೆ ಸಕರ್ಾರವನ್ನು ಒಪ್ಪಿಸುವಲ್ಲಿ ಸ-ಲರಾಗಿ ಆಣೆಕಟ್ಟನ್ನು ನಿಮರ್ಾಣ ಮಾಡಿದರು. ಅದರ -ಲವಾಗಿಯೇ ಇಂದು ಲಕ್ಷಾಂತರ ರೈತರು ಬುದಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು.