ದೇಶ ಕಾಯುವ ಸೈನಿಕರಿಗೆ ಗೌರವ ನೀಡಿ

28blh1 kargil news at bailhongal
ಬೈಲಹೊಂಗಲದಲ್ಲಿ ಬುಧವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಡಿವೈಎಸ್ಪಿ ಶಿವಾನಂದ ಕಟಗಿ, ತಹಸೀಲ್ದಾರ್ ಬಸವರಾಜ ನಾಗರಾಳ, ಉಳವಪ್ಪ ಸಾತೇನಹಳ್ಳಿ, ಸೂರಜ ಮತ್ತಿಕೊಪ್ಪ, ರವಿ ವಣ್ಣೂರ, ಮಹಾಂತೇಶ ಹಿರೇಮಠ, ನಾರಾಯಣ ನಲವಡೆ, ಸಂತೋಷ ಹುಣಶೀಕಟ್ಟಿ ಉಪಸ್ಥಿತರಿದ್ದರು.
Published on

ಬೈಲಹೊಂಗಲ: ಯೋಧರು ತಮ್ಮ ಪ್ರಾಣದ ಹಂಗು ತೊರೆದು ಗಡಿ ರಕ್ಷಣೆಯಲ್ಲಿರುವುದರಿಂದ ನಾವು ಇಂದು ಸುರಕ್ಷಿತ ಹಾಗೂ ನೆಮ್ಮದಿಯ ಬದುಕು ನಡೆಸುತ್ತಿದ್ದೇವೆ. ದೇಶ ಕಾಯುವ ಯೋಧ ಹಾಗೂ ದೇಶಕ್ಕೆ ಅನ್ನ ನೀಡುವ ರೈತನನ್ನು ಎಲ್ಲರೂ ಗೌರವಿಸಬೇಕು ಎಂದು
ತಹಸೀಲ್ದಾರ್ ಬಸವರಾಜ ನಾಗರಾಳ ಹೇಳಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಯ ಕರ್ನಾಟಕ ಸಂಘಟನೆ, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಆಶ್ರಯದಲ್ಲಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗದಲ್ಲಿ ಬುಧವಾರ 22ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಮಾತನಾಡಿ, ಗಡಿಯಲ್ಲಿ ಪ್ರಾಣದ ಹಂಗು ತೊರೆದು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರ ಸೇವೆ ಸ್ಮರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಂಗಪ್ಪ ಗುಗ್ಗರಿ, ನಿಂಗನಗೌಡ ದೊಡಗೌಡರ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಪ್ರಮೋದಕುಮಾರ ವಕ್ಕುಂದಮಠ, ಗೌತಮ ಇಂಚಲ, ವಿಶ್ವನಾಥ ಮಲ್ಲಣ್ಣವರ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಬಸವರಾಜ ಅರಳೀಕಟ್ಟಿ, ನಿವೃತ್ತ ಯೋಧರಾದ ಬಸವರಾಜ ಗುರಣ್ಣವರ, ನಾಗರಾಜ ಗುಂಡ್ಲೂರ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಶ್ರೀಶೈಲ ಹಂಪಿಹೊಳಿ, ಬಸವರಾಜ ದೊಡಮನಿ, ಅಶೋಕ ಗುಂಡ್ಲೂರ, ಸಂಗಮೇಶ ಸವದತ್ತಿಮಠ, ಈಶ್ವರ ಬೋರಕನವರ, ಅಶೋಕ ಸವದತ್ತಿ, ಸೂರಜ ಮತ್ತಿಕೊಪ್ಪ, ರವಿ ವಣ್ಣೂರ, ಮಹಾಂತೇಶ ಹಿರೇಮಠ ಇದ್ದರು. ನಾರಾಯಣ ನಲವಡೆ ಸ್ವಾಗತಿಸಿದರು. ಸಂತೋಷ ಹುಣಶೀಕಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net