ದೇಶ ಕಾಯುವ ಸೈನಿಕರ ಸೇವೆ ಶ್ಲಾಘನೀಯ

web4
ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಾಜಿ ಹಾಗೂ ಹಾಲಿ ಸೈನಿಕರನ್ನು ಸತ್ಕರಿಸಲಾಯಿತು. ಬಸವಪ್ರಕಾಶ ಸ್ವಾಮೀಜಿ, ಎ್.ಎಸ್.ಸಿದ್ದನಗೌಡರ, ಮಹಾಂತೇಶ ಕಮತ, ಗಂಗಪ್ಪ ಗುಗ್ಗರಿ ಇತರರು ಇದ್ದರು.
Published on

ಬೈಲಹೊಂಗಲ: ರಾಷ್ಟ್ರ ರಕ್ಷಣೆಗೆ ಜೀವನವನ್ನೇ ಮುಡಿಪಾಗಿಡುವ ಸೈನಿಕರ ಸೇವೆ ಶ್ಲಾಘನೀಯ ಎಂದು ಉಳವಿ ಬಸವ ಪೀಠದ ಬಸವಪ್ರಕಾಶ ಸ್ವಾಮೀಜಿ ಹೇಳಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 24ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಹಾಗೂ ಸೈನಿಕರ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕನ ಜೀವನ ಮಾದರಿಯನ್ನಾಗಿಟ್ಟುಕೊಂಡು ಸಾಗಿದಾಗ ಬಸವ ಕಂಡ ಸಮಾನತೆಯ ಸಮಬಾಳಿನ ನವಚೈತನ್ಯದ ಸಮಾಜ ಬೆಳೆಯಲಿದೆ ಎಂದರು.

ಮೇಜರ್ ರಾಘವೇಂದ್ರ ಜರಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸೈನ್ಯಕ್ಕೆ ಸೇರಿದರೆ ಮೊಜು ಮಸ್ತಿ, ಊಟ ನಿದ್ರೆ ಕಡೆ ಗಮನ ಹೋಗದೆ ಸದಾ ದೇಶದ ಗಡಿ ರಕ್ಷಣೆಗೆ ಮನಸ್ಸು ಹಾತೊರೆಯುತ್ತದೆ. ಜೀವನದ ಅಮೂಲ್ಯ ಯೌವನದ 25ರಿಂದ 35 ವರ್ಷ ಗಡಿ ಕಾಯುವ ಕಾಯಕದ ಪ್ರಜ್ಞೆ ನಾಗರಿಕ ಸಮಾಜ ಅರ್ಥಮಾಡಿಕೊಳ್ಳಬೇಕು ಎಂದರು.

ನ್ಯಾಯವಾದಿ ಎ್.ಎಸ್.ಸಿದ್ದನಗೌಡರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಕರ್ನಾಟಕದ 13 ಸೈನಿಕರು ಹುತಾತ್ಮರಾಗಿದ್ದು, ಅದರಲ್ಲಿ ಬೈಲಹೊಂಗಲದ ಮೆಕಲಮರ್ಡಿ ಗ್ರಾಮದ ಯಶವಂತ ಕೊಲಕಾರ ಒಬ್ಬರು ಎನ್ನುವುದು ಕಿತ್ತೂರು ನಾಡಿನ ಹೆಮ್ಮೆ ಎಂದರು.

ಮಾಜಿ ಯೋಧ ಮಹಾಂತೇಶ ಕಮತ ಮತ್ತು ಕಾರ್ಗಿಲ್ ಯೋಧ ಗಂಗಪ್ಪ ಗುಗ್ಗರಿ ಮಾತನಾಡಿ, ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ಸದಾಕಾಲ ಪ್ರಸ್ತುತವಾಗಿರುತ್ತದೆ ಎಂದರು. ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಗುರವನ್ನವರ, ಮಂಜುನಾಥ ಬಾಗೇವಾಡಿ, ಶಿದ್ದರಾಯ ಜಾಯಿ, ಮಹಾದೇವ ತುರಮರಿ, ಚಂದ್ರಪ್ಪ ಗೌಡರ, ಬಸವರಾಜ ಇಟಗಿ, ಈರಪ್ಪ ಗಾಳಿ, ತ್ರಿವಿಕ್ರಮ ಸಕ್ಕರಿ, ಮಲ್ಲಿಕಾರ್ಜುನ ಇಂಗಳಗಿ, ಮಡಿವಾಳಪ್ಪ ಬಾಗೇವಾಡಿ, ಅಶೋಕ ಇಟಗಿ, ಶಿವನಗೌಡ ಗಿರೆಪ್ಪಗೌಡರ, ಮಲ್ಲಿಕಾರ್ಜುನ ರೊಟ್ಟಿ, ಕೆ.ಬಿ.ಪಾಟೀಲ, ಅಡಿವೆಪ್ಪ ಕೋಟಗಿ, ನಾಗರಾಜ ಗುಂಡ್ಲೂರ, ಮಲ್ಲಿಕಾರ್ಜುನ ವಕ್ಕುಂದ, ಮೋಹನ ವಕ್ಕುಂದ ಗೌಡಪ್ಪ ಹೊಸಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net