

ಯಾದಗಿರಿ: ದೇಶವನ್ನು ಸದೃಢವಾಗಿ ಕಟ್ಟುವಲ್ಲಿ ಇಂಜಿನಿಯರ್ಸ್ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.
ಇಲ್ಲಿನ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ಶ್ರೀ ತಾಯಮ್ಮ, ಹನುಮಾನ್ ದೇವಸ್ಥಾನದ ಆವರಣದಲ್ಲಿ ಸೋಮವಾರ ಜಿಲ್ಲೆಯ ನೂತನ ಸಚಿವ, ಶಾಸಕರಿಗೆ ಕನ್ಸಲಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ಸಿಸಿಇ) ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಂದು ನಗರವನ್ನು ಸುಂದರವಾಗಿ ನಿಮರ್ಾಣ ಮಾಡಬೇಕಾದರೆ ಅಲ್ಲಿ ಇಂಜಿನಿಯರ್ಗಳ ಶ್ರಮ ಅಪಾರವಾದದು. ದೇಶದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಜಲಾಶಯಗಳ ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಠಿಯಾಗಬೇಕಾದರೆ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆಯಾಗಬೇಕಿದೆ. ಅಲ್ಲದೆ ಪ್ರಸ್ತುತ ಸನ್ನಿವೇಶನದಲ್ಲಿ ಸಾಕಷ್ಟು ಇಂಜಿನಿಯರ್ ಪದವಿಧರರು ಕೆಲಸವಿಲ್ಲದೆ ಕುಳಿತಿದ್ದಾರೆ. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ನಿಮ್ಮದೆಯಾದ ಉದ್ಯಮ ಸ್ಥಾಪನೆ ಮಾಡಿ. ಸಣ್ಣ ಉದ್ಯಮದೊಂದಿಗೆ ಆರಂಭವಾದ ಪಯಣ ಮುಂದೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿದೆ. ಆದರೆ, ನೀವು ಮನಸ್ಸು ಮಾಡುವ ಮೂಲಕ ಗುರಿ ಸಾಸಬೇಕು ಎಂದು ಸಲಹೆ ನೀಡಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಜಿಲ್ಲೆಯ ಇಂಜಿನಿಯರ್ಗಳ ಯಾವುದೇ ಸಮಸ್ಯೆ ಇದ್ದರೂ ಸಹ ಅದನ್ನು ಪರಿಹಾರ ಮಾಡಲು ನನ್ನಿಂದ ಸಾಧ್ಯವಾದಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಮಾತನಾಡಿ, ನಮ್ಮ ಸಂಘ ಸ್ಥಾಪನೆಯಾಗಿ 10 ವರ್ಷ ಕಳೆದಿದೆ. ಆದರೆ, ಇದುವರೆಗೂ ಸ್ವಂತ ಕಟ್ಟಡ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ ಜಿಲ್ಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗ ಮನೆ ನಿಮರ್ಿಸಿಕೊಳ್ಳಬೇಕಾದರೆ ಮರಳು ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದರ ಜತೆಗೆ ಸಕರ್ಾರಿ ಕಾಮಗಾರಿಗಳ ಮೂರನೇ ವ್ಯಕ್ತಿ ತಪಾಸಣೆಗೆ ನಾನ್ ಟೆಕ್ನಿಕಲ್ ವ್ಯಕ್ತಿಗಳಿಗೆ ವಹಿಸಕೊಡಲಾಗಿದ್ದು, ಇದು ತೀರಾ ಅವೈಜ್ಞಾನಿಕವಾಗಿದೆ. ಈ ಬಗ್ಗೆ ಸಚಿವರು ಗಮನ ಹರಿಸುವಂತೆ ಮನವಿ ಮಾಡಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಜಿಪಂ ಮಾಜಿ ಸದಸ್ಯ ರಾಜಶೇಖರ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ಅಜೀಜ್ ಅಹ್ಮದ್ ಸೇನಾ ಇದ್ದರು. ಬಾದಲ್ ಸ್ವಾಗತಿಸಿದರು. ಕರಿಬಸಯ್ಯ ದಂಡೀನಮಠ ನಿರೂಪಿಸಿದರು.