ದೇವಿರಮ್ಮ ಹಾಗೂ ಶ್ರೀ ವೀರಭದ್ರೇಶ್ವರ  ಸ್ವಾಮಿ ಜಾತ್ರೆ

ದೇವಿರಮ್ಮ ಹಾಗೂ ಶ್ರೀ ವೀರಭದ್ರೇಶ್ವರ  ಸ್ವಾಮಿ ಜಾತ್ರೆ
Published on

ಆಲೂರು : ತಾಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀ ದೇವಿರಮ್ಮ ಹಾಗೂ ಶ್ರೀ ವೀರಭದ್ರೇಶ್ವರ  ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ ಮತ್ತು  ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಹಯೋಗದೊಂದಿಗೆ ಶನಿವಾರ ಕಣತೂರು ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು.

ಜಾತ್ರೆ ಅಂಗವಾಗಿ ನಸುಕಿನಿಂದಲೇ ಶ್ರೀ ವೀರಭದ್ರೇಶನಿ ಹಾಗೂ ಶ್ರೀ ದೇವಿರಮ್ಮಗೆ ರುದ್ರಾಭಿಷೇಕ, ವಿವಿಧ ಪೂಜಾ ಕಾರ್ಯಕ್ರಮ ನಡೆದವು. ದೇವಾಸ್ಥಾನದ ಆವರಣದಲ್ಲಿ ಬೆಳಿಗ್ಗೆ 7.30 ರಲ್ಲಿ  ಕೆಂಡೋತ್ಸವ ಜರುಗಿತು. 

ಜಿಲ್ಲೆಯ ಹಾಗೂ ವಿವಿಧ ಭಾಗದಿಂದ ಬಂದಿದ್ದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಸಂಜೆ 4.30 ರಲ್ಲಿ ಸಿಡಿ ಏರುವ ವ್ಯಕ್ತಿ  ಮಡಿವಾಳ ಸಮಾಜದ ಪಾಲಾಕ್ಷ ಶೆಟ್ಟಿ ಅವರನ್ನು ಮಂಗಳವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಸಿಡಿ ನಡೆಯುವ ಸ್ಥಳಕ್ಕೆ ಕರೆತರಲಾಯಿತು. . ಸಿಡಿ ಕಂಬವೇರಿದ ಪಾಲಾಕ್ಷ ಎಡಗೈಯಲ್ಲಿ ಗದೆಯನ್ನು ಹಿಡಿದು, ಬಲಗೈಯಲ್ಲಿ ಪುರಿ ಹಾಗೂ ಬಾಳೆಹಣ್ಣನ್ನು ಎಲ್ಲರ ಮೇಲೆ ಎರಚುವ ಮೂಲಕ ಸಿಡಿ ಆಡಲಾಯಿತು. 

ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು  ಶ್ರದ್ಧಾ ಭಕ್ತಿ ಭಾವದಲ್ಲಿ ಮಿಂದೆಳಿದರು‌. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಆಲೂರು ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net