ದೇವಿ ಮಹಾತ್ಮೆ ಪುರಾಣ

Published on

ಹುಬ್ಬಳ್ಳಿ: ಇಲ್ಲಿಯ ನವನಗರ ಕೆಎಚ್​ಬಿ ಕಾಲನಿ ಶ್ರೀ ನಂದೀಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ವತಿಯಿಂದ ನವರಾತ್ರಿ ಉತ್ಸವದ ನಿಮಿತ್ತ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನವನ್ನು ಅ. 3ರಿಂದ 11ರ ವರೆಗೆ ಆಯೋಜಿಸಲಾಗಿದೆ.

ಆಧ್ಯಾತ್ಮಿಕ ಜೀವಿ ಶಿದ್ದಲಿಂಗಪ್ಪ ಗರಗ ಅವರು ನಿತ್ಯ ಸಂಜೆ 6.30ಕ್ಕೆ ಪ್ರವಚನ ನೀಡುವರು. ಅ. 11ರಂದು ದೇವಿ ಪುರಾಣ ಮಂಗಲೋತ್ಸವ, ಅನ್ನಸಂತರ್ಪಣೆ ಜರುಗಲಿದೆ. ಅ. 12ರಂದು ವಿಜಯದಶಮಿ, ಪಲ್ಲಕ್ಕಿ ಉತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net