ದೇವಿ ತಾಳಿ ಬಿಡದ ಕಳ್ಳರು!

sirakatnalli
Published on

ಬೀದರ್: ಸಿರಕಟನಳ್ಳಿ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಕನ್ನ ಹಾಕಿರುವ ಕಳ್ಳರು, ದೇವರ ಮೇಲಿರುವ ಮಾಂಗಲ್ಯ ಕಳವು ಮಾಡಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.

ಊರಿನ ಮಧ್ಯದಲ್ಲಿರುವ ದೇವಸ್ಥಾನದಲ್ಲಿ ಭಾಗ್ಯವಂತಿ ದೇವಿ ಮೂರ್ತಿಗೆ ಇದ್ದ 8 ಗ್ರಾಂ ಬಂಗಾರದ ತಾಳಿ ಹಾಗೂ ದೇವಸ್ಥಾನದ ಹುಂಡಿ ಒಡೆದು ಹಣ ದೋಚಲಾಗಿದೆ. ಹುಂಡಿಯಲ್ಲಿ 60 ಸಾವಿರ ರೂ. ಸಂಗ್ರಹವಾಗಿತ್ತು ಎನ್ನಲಾಗಿದೆ.

ದೇವಸ್ಥಾನ ಜತೆಗೆ ವಿವಿಧ ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಮೆಹಬೂಬ್ ಅಲಿ ಎಂಬುವರ ಮನೆಗೆ ಕನ್ನ ಹಾಕಿ, ನಗದು 25 ಸಾವಿರ ರೂ. ಕಳವು ಮಾಡಲಾಗಿದೆ. ವಿವಿಧ ಮನೆಗಳ ಬೀಗ ಒಡೆದರೆ, ಹಲವು ಮನೆಗಳಿಗೆ ಹೊರಗಡೆಯಿಂದ ಲಾಕ್ ಮಾಡಿದ್ದರು. ಆದರೆ ಈ ಎರಡು ಕಡೆ ಬಿಟ್ಟು ಯಾವುದೇ ಮನೆಗಳಲ್ಲಿ ಕಳ್ಳತನ ನಡೆದಿಲ್ಲ.

ಸ್ಥಳಕ್ಕೆ ಅಪರಾಧ ಪಿಎಸ್ಐ ಮೆಹಬೂಬ್ ಅಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಗದಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net