

ಸೋಮವಾರಪೇಟೆ: ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲನಿಯ ಶ್ರೀ ಗಣಪತಿ, ಭಗವತಿ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಥಮ ವರ್ಷದ ವಾರ್ಷಿಕ ಮಹಾಪೂಜೆ ಜ.7 ಮತ್ತು 8ರಂದು ಆಯೋಜನೆಗೊಂಡಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಿ.ಜಗನ್ನಾಥ್ ತಿಳಿಸಿದ್ದಾರೆ.
7ರಛ್ಠ ಬೆಳಗ್ಗೆ 10ಕ್ಕೆ ಗ್ರಾಮದಲ್ಲಿ ಚಂಡೆವಾದ್ಯದೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ, ಸಂಜೆ 6ರಿಂದ 1.30ರವರೆಗೆ ಮಹಾ ಭಗವತಿ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.
8ರ ಬೆಳಗ್ಗೆ 6ರಿಂದ ಸಂಜೆವರೆಗೆ ವಿವಿಧ ಪೂಜೆಗಳು, ಸಂಜೆ 4ಕ್ಕೆ ಅಯ್ಯಪ್ಪ ಆನಂದ ನೃತ್ಯ ನಡೆಯಲಿದೆ. ಕೇರಳದ ತಂತ್ರಿ ಶ್ರೀಹರಿಕೃಷ್ಣನ್ ನಂಬೂದರಿ ಪೂಜೆಯ ನೇತೃತ್ವ ವಹಿಸಲಿದ್ದಾರೆ.