ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿ ತೋವಿನಕೆರೆ ಗ್ರಾಮದ ಕಾಳಘಟ್ಟಮ್ಮ ದೇವಾಲಯದ ಬೀಗ ಮುರಿದು ಶನಿವಾರ ರಾತ್ರಿ ದೇವಿಯ ಚಿನ್ನದ ಹಾಗೂ ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ. ದಂಡಿನಶಿವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಕೊಂಡಿದ್ದಾರೆ.