ದೇವಾಲಯದ ಬಾಗಿಲು ಮುರಿದು ಕಳವು

Published on

ತಿಪಟೂರು: ತಾಲೂಕಿನ ಕೆ.ಬಿ.ಕ್ರಾಸ್​ ಸಮೀಪದ ಬೀರಸಂದ್ರದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಭಾನುವಾರ ರಾತ್ರಿ ದೇವಸ್ಥಾನದ ಬಾಗಿಲು ಮರಿದು ದೇವಿಯ ಚಿನ್ನಾಭರಣ ಹಾಗೂ ಹುಂಡಿ ಕದ್ದೊಯ್ದಿದ್ದಾರೆ. ಕಳೆದ ಏಪ್ರಿಲ್​ ತಿಂಗಳಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಇಲ್ಲಿವರೆಗೂ ಅಂದಾಜು 30 ಸಾವಿರ ರೂ. ಸಂಗ್ರಹವಾಗಿತ್ತು ಎಂದು ಅಂದಾಜಿಸಲಾಗಿದೆ. ದೇವಸ್ಥಾನದ ಗುಡಿಗೌಡರಾದ ರಾಜಣ್ಣ ಅವರು ಕಿಬ್ಬನಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಡಿವೈಎಸ್​ಪಿ ವಿನಾಯಕ ಎನ್​ ಶಟಗೇರಿ, ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್​ ಮತ್ತು ಕಿಬ್ಬನಹಳ್ಳಿ ಠಾಣೆಯ ಸಬ್​ಇನ್​ಸ್ಪೆಕ್ಟರ್​ ಮಹೇಶ್​ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತುಮಕೂರಿನಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net