ದೇವಾಲಯದ ಅಭಿವೃದ್ಧಿ ನೀಲಿನಕ್ಷೆ ಬಿಡುಗಡೆ

5sirsi7
Published on

ಶಿರಸಿ: ಇಲ್ಲಿನ ಮಾರಿಕಾಂಬಾದೇವಿ ದೇವಸ್ಥಾನದ ಸರ್ವ ತೋಮುಖ ಅಭಿವೃದ್ಧಿಗೆ ಪೂರಕವಾದ ಅಂದಾಜು 200 ಕೋಟಿ ರೂ.ಗಳ ಅಭಿವೃದ್ಧಿ ನೀಲಿನಕ್ಷೆಯನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಗುರುವಾರ ಬಿಡುಗಡೆ ಮಾಡಿದರು.

ಮಾರಿಕಾಂಬಾದೇವಿ ದೇವಾಲಯ ಹಾಗೂ ಅಧೀನ ದೇವಾಲಯಗಳ ಅಭಿವೃದ್ಧಿ, ಆಸ್ತಿಗಳು, ಅಭಿವೃದ್ಧಿ ಮಾಡಬೇಕಾದ ಸ್ಥಳಗಳು, ಕೈಗೊಂಡ ಯೋಜನೆಗಳ ಮಾಹಿತಿ ಈ ನೀಲಿನಕ್ಷೆ ಒಳಗೊಂಡಿದೆ. ನ್ಯಾಯಾಧೀಶೆ ಸುನೀತಾ, ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ ಹಾಗೂ ಸದಸ್ಯರಾದ ಶಶಿಕಲಾ ಚಂದ್ರಪಟ್ಟಣ, ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಬಾಬುದಾರ ಪ್ರಮುಖರಾದ ಜಗದೀಶ ಗೌಡ, ರಾಮು ಕಿಣಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net