ದೇವಾಲಯಗಳೇ ಭಾರತೀಯ ಸಂಸ್ಕೃತಿಯ ತಳಹದಿ

24ss3
ನೀರುಗುಂದ ಗ್ರಾಮದ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವದ ಧರ್ಮಿಕ ಸಭೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು.
Published on

ಶನಿವಾರಸಂತೆ: ದೇವಾಲಯಗಳು ಭಾರತೀಯ ಸಂಸ್ಕೃತಿಯ ತಳಹದಿಯಾಗಿರುವುದರಿಂದ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ಸಮಿಪದ ನೀರುಗುಂದ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಪ್ರತಿಷ್ಠಾನೆ ಮಹೋತ್ಸವ ಹಾಗೂ ಕೆಂಡೋತ್ಸವ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯ ಸಂಸ್ಕೃತಿಯನ್ನು ಮೂಲವಾಗಿರಿಸಿಕೊಂಡು ಧರ್ಮದ ತಳಹದಿಯಲ್ಲಿ ನಾವು ಬದುಕು ಸಾಗಿಸುತ್ತಿದ್ದೇವೆ. ಪ್ರಪಂಚದಲ್ಲಿ ಭಾರತ ಒಂದು ದೇವಾಲಯ ಇದ್ದಂತೆ. ಇಂತಹ ಪವಿತ್ರ ದೇಶದಲ್ಲಿ ನಾವಿದ್ದೇವೆ, ಪರಿಸರವನ್ನು ಮೈಗೂಡಿಕೊಂಡು ಕಷ್ಟ, ನಷ್ಟಗಳೊಂದಿಗೆ ಧರ್ಮದ ಹಾದಿಯಲ್ಲಿ ನಾವು ಜೀವನ ನಡೆಸುತ್ತಿರುವ ಮೂಲಕ ನೆಮ್ಮದಿ ಕಾಣುತ್ತಿದ್ದೇವೆ ಎಂದರು.
ನೀರುಗುಂದ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಮಸ್ಥರು ಒಟ್ಟುಗೂಡಿ ಗ್ರಾಮದ ಪ್ರಮುಖ ದೇವರುಗಳಾದ ಶ್ರೀ ಮಲ್ಲೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯಗಳನ್ನು ನವಿಕರಿಸುತ್ತಿರುವುದು ಮಹಾನ್ ಧಾರ್ಮಿಕ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವದ ಅಂಗವಾಗಿ ಮೂರು ದಿನದ ವರೆಗೆ ವಿವಿಧ ಧಾರ್ಮಿಕ ಕಾರ್ಯಗಳು, ಅಡ್ಡೆ ಸಮೇತ ಉತ್ಸವ ಮೆರವಣಿಗೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳ ಬಳಿಕ ಕೆಂಡೋತ್ಸವ ಕಾರ್ಯದ ಮೂಲಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net