ದೇವಾಲಯಗಳಿಂದ ಮಾನಸಿಕ ನೆಮ್ಮದಿ

18-22
ಕೊಕಟನೂರ ಗ್ರಾಮದಲ್ಲಿ ಏರ್ಪಡಿಸಿದ್ದ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಚಿದಾನಂದ ಸವದಿ, ಸದಾಶಿವ ಬುಟಾಳಿ, ಸಿದ್ದಪ್ಪ ಮುದಕಣ್ಣವರ, ಅಜಿತ ಭಜಂತ್ರಿ, ಪ್ರಲ್ಹಾದ ದಡ್ಡಿ ಇತರರಿದ್ದರು.
Published on

ಅಥಣಿ ಗ್ರಾಮೀಣ, ಬೆಳಗಾವಿ: ದೇವಾಲಯಗಳು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಏಕೈಕ ಸಾಧನಗಳು ಎಂದು ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸೋಮವಾರ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ನೂಲಿಯ ಚಂದಯ್ಯ ಯುವ ಸಂಘದ ವತಿಯಿಂದ ಆಯೋಜಿಸಿದ್ದ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆಯನ್ನು ಸನ್ಮಾರ್ಗದ ಕಡೆ ಮುನ್ನಡೆಸಿ, ಅವರಲ್ಲಿ ಮಾನಸಿಕ ಶಾಂತಿ ನೆಲೆಸಲು ದೇವಾಲಯಗಳು ಸಹಕಾರಿಯಾಗಿವೆ ಎಂದರು. ಬಿಜೆಪಿ ಯುವನಾಯಕ ಚಿದಾನಂದ ಸವದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ 50 ಲಕ್ಷ ರೂ. ಮೊತ್ತದ ಕೊರವ ಸಮುದಾಯ ಭವನ ನಿರ್ಮಾಣಕ್ಕೆ ವಿಪ ಸದಸ್ಯ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಆದಷ್ಟು ಬೇಗ ಪರವಾನಗಿ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿದರು. ಗುರುಮೂರ್ತಯ್ಯ ಕಾಡದೇವರಮಠ ಆಶೀರ್ವಚನ ನೀಡಿದರು. ನೂಲಿಯ ಚಂದಯ್ಯ ಯುವ ಸಂಘದ ಅಧ್ಯಕ್ಷ ರಮೇಶ ಕೊಕಟನೂರ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಂಕಿ ಹಿರೇಮಠದ ಶಿವಲಿಂಗ ಶಿವಾಚಾರ್ಯರು ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿದರು.

ಮುಖಂಡರಾದ ನಾನಾಸಾಹೇಬ ಅವತಾಡೆ, ಮಹೇಶ ಕಾಡದೇವರಮಠ, ಅರ್ಜುನ ಪೂಜಾರಿ, ವಕೀಲ ಸುಭಾಷ ಪಾಟಣಕರ, ತಿಪ್ಪಣ್ಣ ಭಜಂತ್ರಿ, ಮಲ್ಲಿಕಾರ್ಜುನ ಅಂದಾನಿ, ಸುಭಾಷ ಸೋನಕರ, ಅನಿಲ ಮುಳಿಕ, ಕಾಂತು ಮಾದರ, ಪ್ರಶಾಂತ ಕಾಂಬಳೆ, ಸಂತೋಷ ಸಾವಡಕರ, ಮಹಾಂತೇಶ ಠಕ್ಕಣ್ಣವರ, ಪ್ರಲ್ಹಾದ ದಡ್ಡಿ, ಅಜಿತ ಭಜಂತ್ರಿ, ಕುಮಾರ ನಾವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net