ದೇವಾಲಯಗಳಲ್ಲಿ ಸ್ವಚ್ಛತೆಯಿದ್ದರೆ ಭಕ್ತಿ

bhr toilet
ಬಾಳೆಹೊನ್ನೂರಿನ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಶೌಚಗೃಹವನ್ನು ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಉದ್ಘಾಟಿಸಿದರು. ಎಚ್.ಡಿ.ಸತೀಶ್, ಚೈತನ್ಯ ವೆಂಕಿ, ಬಿ.ಗಿರೀಶ್, ಬಿ.ಕೆ.ನಾಗರಾಜ್, ಸುಂದರ್ ಇಟ್ಟಿಗೆ ಇತರರಿದ್ದರು.
Published on

ಬಾಳೆಹೊನ್ನೂರು: ದೇವಾಲಯಗಳು ಸ್ವಚ್ಛತೆಯ ತಾಣವಾಗಿ ಭಕ್ತರಿಗೆ ಧರ್ಮ ಕಾರ್ಯಗಳನ್ನು ತಿಳಿಸಬೇಕು ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಹೇಳಿದರು.

ಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಶೌಚಗೃಹ ಉದ್ಘಾಟಿಸಿ ಮಾತನಾಡಿದರು. ದೇವಾಲಯಗಳು, ಧರ್ಮ ಕೇಂದ್ರಗಳ ಆವರಣದಲ್ಲಿ ಸ್ವಚ್ಛತೆ ಇದ್ದರೆ ಭಕ್ತಿ ಮೂಡಲಿದೆ. ಭಕ್ತರು ಸಹ ದೇವಾಲಯಗಳ ಆವರಣ, ದೇವಾಲಯದ ಪ್ರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ 3 ಲಕ್ಷ ರೂ.ಗೂ. ಅಧಿಕ ವೆಚ್ಚದಲ್ಲಿ ಶೌಚಗೃಹ ಹಾಗೂ ಸ್ನಾನಗೃಹ ನಿರ್ಮಿಸಲಾಗಿದೆ. ನವರಾತ್ರಿ ಸಂದರ್ಭದಲ್ಲಿ ನಿತ್ಯವೂ ಸಾವಿರಾರು ಭಕ್ತರು ದೇವಾಲಯ ಹಾಗೂ ದುರ್ಗಾದೇವಿ ದರ್ಶನಕ್ಕೆ ಆಗಮಿಸಲಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸಮಿತಿ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ನವರಾತ್ರಿ ದುರ್ಗಾದೇವಿ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಕಾರ್ಯದರ್ಶಿ ಎಚ್.ಡಿ.ಸತೀಶ್, ಖಜಾಂಚಿ ಭಾಸ್ಕರ್ ವೆನಿಲ್ಲಾ, ಸಹ ಖಜಾಂಚಿ ಚೈತನ್ಯ ವೆಂಕಿ, ಪ್ರಮುಖರಾದ ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಉಪೇಂದ್ರ ಆಚಾರ್ಯ, ಬಿ.ಗಿರೀಶ್, ಬಿ.ಕೆ.ನಾಗರಾಜ್, ನಾರಾಯಣಶೆಟ್ಟಿ ತುಪ್ಪೂರು, ಸುಂದರ್ ಇಟ್ಟಿಗೆ, ಶ್ರೀಕಾಂತ್, ಮಂಜು ಹೊಳೆಬಾಗಿಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net