ದೇವಾಲಯ ಬಾಗಿಲು ಮುರಿದು ಕಳವು

03 CRP-2A
Published on

ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಕೊಪ್ಪಲು, ಬಡಕ್ಯಾತನಹಳ್ಳಿ ಗ್ರಾಮದ ಶ್ರೀ ಉಲ್ಲೇಕೆರೆಯಮ್ಮ, ಬೋರಪ್ಪನ ಗುಡಿಯ ಬಾಗಿಲು ಮುರಿದು ಖದೀಮರು ಕಳವು ಮಾಡಿದ್ದಾರೆ.

ಶುಕ್ರವಾರ ತಡರಾತ್ರಿ ದೇವಾಲಯದ ಬಾಗಿಲು ಮುರಿದು ಒಳನುಗ್ಗಿದ ಖದೀಮರು ದೇವರ ಮೇಲಿದ್ದ ಮಾಂಗಲ್ಯ ಸರ, ಲಿಂಗದ ಕಾಯಿ, ಗುಂಡಿನ ಸರ ಹಾಗೂ ಬೋರಪ್ಪನ ಗುಡಿಯಲ್ಲಿ ದೇವರ ಮೇಲಿನ ಸರ, ದೀಪಾಲೆ ಕಂಬಗಳು ಮತ್ತು ಎರಡು ಹುಂಡಿಯಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಹಳ್ಳಿ ಮೈಸೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಸಬ್ ಇನ್‌ಸ್ಪೆಕ್ಟರ್ ಸಲ್ಮಾನ್ ಖಾನ್ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net