ದೇವಾಲಯ ನೆಮ್ಮದಿ ಜೀವನ ಕರುಣಿಸುವ ಪುಣ್ಯಕ್ಷೇತ್ರ

8 ckm 11
ಚಿಕ್ಕಮಗಳೂರು ಹೊರವಲಯದ ಉಂಡೇದಾಸರಹಳ್ಳಿಯಲ್ಲಿ ಶ್ರೀ ಲೋಕದಮ್ಮ, ಶ್ರೀಮುದಿಯಮ್ಮದೇವಿ ಹಾಗೂ ಶ್ರೀ ಒಂಟಿಕಲ್ ಭೂತಪ್ಪ ದೇವರುಗಳ ನೂತನ ವಿಗ್ರಹಗಳ ಅಷ್ಟಬಂಧ, ಪ್ರಾಣಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶೋಹಣ ಮಹೋತ್ಸವದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಭಾಗವಹಿಸಿದ್ದರು. ಎಂ.ಸಿ.ಶಿವಾನAದ ಸ್ವಾಮಿ, ಎ.ಎನ್.ಮಹೇಶ್, ಸುಜಾತ ಶಿವಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಭಗವಂತನು ನೆಲೆಸಿರುವ ದೇವಾಲಯಗಳು ಮನುಷ್ಯನ ಮಾನಸಿಕ ಒತ್ತಡ ನಿವಾರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾತ್ವಿಕ ಜೀವನದತ್ತ ಕೊಂಡೊಯ್ಯುವ ಅತ್ಯಂತ ಪುಣ್ಯಕ್ಷೇತ್ರಗಳು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಹೊರವಲಯದ ಉಂಡೇದಾಸರಹಳ್ಳಿಯಲ್ಲಿ ಶ್ರೀ ಲೋಕದಮ್ಮ, ಶ್ರೀಮುದಿಯಮ್ಮದೇವಿ ಹಾಗೂ ಶ್ರೀ ಒಂಟಿಕಲ್ ಭೂತಪ್ಪ ದೇವರುಗಳ ನೂತನ ವಿಗ್ರಹಗಳ ಅಷ್ಟಬಂಧ, ಪ್ರಾಣಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶೋಹಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಗವಂತನ ಗರ್ಭಗುಡಿಗೆ ಅರ್ಪಿಸುವ ಪೂಜಾಸಾಮಾಗ್ರಿಗಳು ಅಭಿಷೇಕದ ಬಳಿಕ ಪ್ರಸಾದವಾದಂತೆ, ಮಾನವ ಬದುಕಿನ ಜಂಜಾಟವನ್ನು ಬದಿಗಿರಿಸಿ ಮುಕ್ತ ಮನಸ್ಸಿನಿಂದ ದೇಗುಲಕ್ಕೆ ತೆರಳಿ ಹಿಂತಿರುಗಿದರೆ ಸಂಸ್ಕಾರವAತ, ಮಾನವತಾವಧಿ ಹಾಗೂ ಮನುಷ್ಯತ್ವ ಹೊಂದುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ದೇವಾಲಯಗಳನ್ನು ಜೀರ್ಣೋದ್ದಾರ ಅಥವಾ ನೂತನವಾಗಿ ನಿರ್ಮಿಸಿದರೆ ಸಾಲದು, ನಿರಂತರ ಪೂಜಾಕೈಂಕಾರ್ಯಗಳನ್ನು ಕೈಗೊಳ್ಳುವುದು ಅತಿಮುಖ್ಯ. ಹೀಗಾಗಿ ಭಕ್ತಾಧಿಗಳು ದೇವಾಲಯಕ್ಕೆ ತೆರಳಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದರೆ ಹಿಂತಿರುಗಿದರೆ ಮನಸ್ಸಿನಲ್ಲಿ ಶಾಂತಿ ಲಭಿಸಲು ಸಾಧ್ಯ ಎಂಬುದು ಅರಿಯಬೇಕು ಎಂದರು.

ಜಗತ್ತಿನಲ್ಲಿ ಮಾನವ ಜನ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡುವ ಸಂತಶ್ರೇಷ್ಟರು, ದಾರ್ಶನಿಕರ ಆಶಯದಂತೆ ಬದುಕುವುದೇ ನೈಜ ಸತ್ಯ ಎಂದ ಅವರು ಹಿರಿಯರು, ಕಿರಿಯರಾಗಲೀ ದೇವಾಲಯದಿಂದ ಹಿಂತಿರುಗಿದ ನಂತರ ಸನ್ನಡತೆ, ಸದ್ಬಾವನೆ ಹಾಗೂ ಸಹೋದರತೆಯ ಸಂಕೇತವನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

ಶ್ರೀ ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆರ್ಶೀಚನ ನೀಡಿ, ಆಧುನಿಕತೆಯ ಭರದಲ್ಲಿ ಭಾರತೀಯ ಪರಂಪರೆ, ಪೂಜಾ ಸಂಸ್ಕೃತಿ ಹಾಗೂ ಜೀವನ ಪದ್ಧತಿ ಬದಲಾಗಿ ಸನಾತನ ಧರ್ಮ ಕ್ಷೀಣಿಸುತ್ತಿದೆ. ವರ್ತಮಾನದಲ್ಲಿ ಬದುಕಲು ಸನಾತನ ಸಂಸ್ಕೃತಿ ಬಹಳಮುಖ್ಯ. ಧರ್ಮವನ್ನು ಬೆಳೆಸಿ ಉಳಿಸುವ ಜವಾಬ್ದಾರಿ ಯುವಸಮೂಹದ ಮೇಲಿದೆ ಎಂದು ಹೇಳಿದರು.

ಭಾರತೀಯ ಸನಾತನ ಸಂಸ್ಕೃತಿ ಪ್ರಪಂಚದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ಆಸೆ, ಆಕಾಂಕ್ಷೆಗಳನ್ನು ತೋರಿಸಿ ಮತಾಂತರಿಸಲು ಪ್ರೇರೇಪಿಸುತ್ತಾರೆ. ಈ ಬಗ್ಗೆ ಸನಾತನಿಗಳು ಎಚ್ಚೆತ್ತುಕೊಳ್ಳಬೇಕು. ಸೃಷ್ಟಿಕರ್ತನ ವಿರುದ್ಧವಾಗಿ ನಡೆಯದೇ ಇಡೀ ಮನುಕುಲಕ್ಕೆ ಜ್ಞಾನವನ್ನು ನೀಡುವ ಸನಾತನ ಸಂಸ್ಕೃತಿ ಚಿರಋಣಿಯಾಗಬೇಕು ಎಂದು ತಿಳಿಸಿದರು.

ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಣ್ಣ ಮಾತನಾಡಿ, ಮುಂಜಾನೆ ನೂತನ ವಿಗ್ರಹಗಳ ಅಷ್ಠಬಂಧ, ಪ್ರಾಣ ಪ್ರತಿಷ್ಟಾಪನೆಯೊಂದಿಗೆ, ಕಲಾ ಆಕರ್ಷಣೆ, ಹೋಮ, ದುರ್ಗಾಹೋಮ, ಸಪ್ತಮಾತೃ ದೇವತಾ ಹೋ ಮಗಳ ನಂತರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಗಂಗೆಭಾವಿಯಿAದ ಪೂರ್ಣಕುಂಭಾ ಪೂಜೆ ಯೊಂದಿಗೆ ಗ್ರಾಮದ ಬೀದಿಗಳಲ್ಲಿ ಸಾಗಿ ದೇವಾಲಯ ಪ್ರವೇಶಿಸಿ ಅಭಿಷೇಕ ನಡೆಸಲಾಯಿತು ಎಂದರು.

ನAತರ ಮಹಾಸ್ವಾಮೀಜಿಯ ನೇತೃತ್ವದಲ್ಲಿ ಕಲಶಾರೋಹಣ, ವಿಶೇಷ ಪೂಜೆ, ಕುಂಭಾಭಿಷೇಕ, ಪ್ರಾಣ ಪ್ರತಿಷ್ಟೆ, ದೇವತೆಗಳಿಗೆ ನೇತ್ರೋನ್ಮಿಲನ, ಪೂರ್ಣಾಹುತಿ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಜರುಗಿತು. ತದನಂತರ ಭಕ್ತಾಧಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಯಿತು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಸದಸ್ಯೆ ರೂಪ ಕುಮಾರ್, ಕಾಂಗ್ರೆಸ್ ನಗರ ಉಪಾಧ್ಯಕ್ಷ ವರದರಾಜ್, ಮುಖಂಡರಾದ ತನೋಜ್‌ನಾಯ್ಡು, ಸೋಮಶೇಖರ್, ದೇವಾಲಯ ಸಮಿತಿ ಖಜಾಂಚಿ ಪುಟ್ಟಸ್ವಾಮಿ, ಸದಸ್ಯರಾದ ಬಸವರಾಜಪ್ಪ, ನಾಗರಾಜ್, ಈರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net