ದೇವಾಲಯಕ್ಕೆ ಜಾಗ ಮಂಜೂರು

18 mbl ph 2
Published on

ಮುಳಬಾಗಿಲು: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ನರಸಿಂಹತೀರ್ಥ ಬಳಿಯ ಗುಡ್ಡದ ಮೇಲೆ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೆ 30 ಗುಂಟೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡಲಾಗುವುದು ಎಂದು ಸಚಿವ ಎಚ್.ನಾಗೇಶ್ ಭರವಸೆ ನೀಡಿದರು.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ಮುಳಬಾಗಿಲು ಶಾಖೆಯಿಂದ ನರಸಿಂಹತೀರ್ಥ ಬಳಿಯ ಗುಡ್ಡದಮೇಲೆ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೆ ಈಗಾಗಲೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಎಸಿ ಅನುಮೋದನೆ ನೀಡಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದಾರೆ. ಸರ್ಕಾರದಿಂದ 30 ಗುಂಟೆ ಜಮೀನನ್ನು ಶೀಘ್ರದಲ್ಲೇ ಸೇವಾ ಸಮಿತಿ ಹೆಸರಿಗೆ ದಾಖಲೆ ಮಾಡಿಕೊಡಲಾಗುವುದು. ದೇವಾಲಯ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿಕೊಂಡು ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.

ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಪುರಸಭೆ ಮಾಜಿ ಸದಸ್ಯ ಕಲ್ಲುಪಲ್ಲಿ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸೊನ್ನವಾಡಿ ಸಿ.ರಘುಪತಿ, ನಗರಸಭೆ ಸದಸ್ಯ ಗರಡಿ ಆರ್.ಶಂಕರಪ್ಪ, ಮುಖಂಡ ರಘು, ದರಕಾಸ್ತು ಸಮಿತಿ ಸದಸ್ಯ ಆರ್.ಪೆದ್ದಪ್ಪಯ್ಯ, ಅಖಿಲ ಭಾರತ ಅಯ್ಯಪ್ಪಸೇವಾ ಸಮಿತಿ ಮುಖಂಡರಾದ ಪಿ.ಬಿ.ಸುಬ್ರಮಣ್ಯಂ, ಜೆ.ಸುಬ್ರಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net