ದೇವಾಲಯ ಜೀರ್ಣೋದ್ದಾರಕ್ಕೆ ೧ ಲಕ್ಷ ರೂ. ದೇಣಿಗೆ

4 ckm 11
ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸಮೀಪದ ಬಸವನಕೋಡಿ ಗ್ರಾಮದ ಬಸವೇ ಶ್ವರ ದೇವಾಲಯದ ಜೀರ್ಣೋದ್ದಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಒಂದು ಲಕ್ಷ ರೂ. ಡಿಡಿಯನ್ನು ದೇವಸ್ಥಾನ ಸಮಿತಿಗೆ ತಾಲೂಕು ಯೋಜನಾಧಿಕಾರಿ ರಮೇಶ್ ನಾಯ್ಕ್ ಮೂಲಕ ಹಸ್ತಾಂತರಿಸಿದರು.
Published on
ಚಿಕ್ಕಮಗಳೂರು: ತಾಲೂಕಿನ ಬೆಳವಾಡಿ ಸಮೀಪದ ಬಸವನಕೋಡಿ ಗ್ರಾಮದ ಬಸವೇ ಶ್ವರ ದೇವಾಲಯದ ಜೀರ್ಣೋದ್ದಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಒಂದು ಲಕ್ಷ ರೂ. ಡಿಡಿಯನ್ನು ದೇವಸ್ಥಾನ ಸಮಿತಿಗೆ ತಾಲೂಕು ಯೋಜನಾಧಿಕಾರಿ ರಮೇಶ್ ನಾಯ್ಕ್ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಶ್ರೀಧರ್, ಗ್ರಾಮ ಪಂಚಾಯ್ತಿ ಸದಸ್ಯ ಮಧುಕುಮಾರ್, ಊರಿನ ಹಿರಿಯರಾದ ಪುಟ್ಟೇಗೌಡ, ಸಮಿತಿ ಸದಸ್ಯ ರಾಜು, ಮೇಲ್ವಿಚಾರಕ ದೀ ಪಕ್, ಸೇವಾ ಪ್ರತಿನಿಧಿ ಶೀಲಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net