ದೇವಾಂಗ ಪೇಟೆಯಲ್ಲಿ ಎನ್.ಮಹೇಶ್ ಪ್ರಚಾರ

26kglphoto-1
ಕೊಳ್ಳೇಗಾಲ ಪಟ್ಟಣದಲ್ಲಿರುವ ಜಯ ಇನ್ಸ್‌ಸ್ಟಿಟ್ಯೂಟ್ ರಸ್ತೆಯಲ್ಲಿ ಶಾಸಕ ಎನ್.ಮಹೇಶ್ ಮತಯಾಚನೆ ಮಾಡಿದರು. ಎಸ್. ಬಾಲರಾಜು, ಎಸ್.ಮಹೇಂದರ್ ಇತರರು ಇದ್ದರು.
Published on

ಕೊಳ್ಳೇಗಾಲ: ಪಟ್ಣಣದ ದೇವಾಂಗ ಪೇಟೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಅಭ್ಯರ್ಥಿ ಶಾಸಕ ಎನ್.ಮಹೇಶ್ ಮಾತಯಾಚನೆ ಮಾಡಿದರು.

ಶ್ರೀ ಮದ್ದೇವಲ ಮಹರ್ಷಿಗಳ ಮಹಾದ್ವಾರದಿಂದ ಶಾಸಕ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಚಿತ್ರ ನಿರ್ದೇಶಕ ಎಸ್.ಮಹೇಂದರ್ ಜತೆ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಮನೆ ಮನೆಗೂ ತೆರಳಿ ಮತಯಾಚಿಸಿದರು. ದೇವಾಂಗ ಪೇಟೆಯಲ್ಲಿರುವ ಶ್ರೀ ಮುನೇಶ್ವರ ದೇವಸ್ಥಾನ ಬೀದಿ, ಬಳೆ ಪೇಟೆ, ಚೌಡೇಶ್ವರಿ ಕಲ್ಯಾಣ ಮಂಟಪ ರ‌್ತಸೆ, ರಾಜರಾಜೇಶ್ವರಿ ಕಲ್ಯಾಣ ಮಂಟಪ ರಸ್ತೆ, ಗರಡಿ ಬೀದಿ, ಎಸ್.ಟಿ.ರೋಡ್, ಜಯ ಇನ್‌ಸ್ಟಿಟ್ಯೂಟ್ ರೋಡ್, ಪಂಚರಂಗಿ ವೃತ್ತ, ಮಾರಿ ಗುಡಿ ಬೀದಿ, ಕೋಡಿ ಬೀದಿಗಳಲ್ಲಿ ಪ್ರಚಾರ ನಡೆಸಲಾಯಿತು.

ಶಾಸಕ ಎನ್.ಮಹೇಶ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉತ್ಸಾಹದಿಂದ ಮತಯಾಚನೆ ಮಾಡುತ್ತಿದ್ದಾರೆ. ಅಂತೆಯೇ ಮೊದಲಿಗೆ ದೇವಾಂಗ ಪೇಟೆಯ ಹಲವು ಬೀದಿ ಮತ್ತು ರಸ್ತೆಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಮತ ಕೇಳಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮುಂದೆ 31 ವಾರ್ಡ್‌ಗಳಲ್ಲೂ ಮತಯಾಚನೆ ನಡೆಯುತ್ತದೆ. ಆಯಾ ವಾರ್ಡ್ ನಗರಸಭೆ ಸದಸ್ಯರು, ನಗರ ಮಂಡಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಜವಾಬ್ದಾರಿ ವಹಿಸಲಿದ್ದಾರೆ ಎಂದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ವಿವಿಧ ಪಕ್ಷಗಳನ್ನು ತೊರೆದು ಹೆಚ್ಚಿನ ಸಂಖ್ಯೆಯ ಜನರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಪಕ್ಷ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದ್ದು ಈ ಬಾರಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಚಿಂತು ಪರಮೇಶ್, ರಾಮಕೃಷ್ಣ, ಮಧುಚಂದ್ರ, ನಗರ ಮಂಡಲ ಅಧ್ಯಕ್ಷ ರಮೇಶ್ ಮೂರಾರಿ, ನಗರಸಭಾ ಮಾಜಿ ಅಧ್ಯಕ್ಷ ಪಿ.ಎನ್.ಪರಮೇಶ್ವರಯ್ಯ, ಮಾಜಿ ಸದಸ್ಯ ಕೆ.ಕೆ.ಮೂರ್ತಿ, ಚಂದ್ರು, ಮುಖಂಡ ರಮೇಶ್, ಯುವ ಮೋರ್ಚಾ ಅಧ್ಯಕ್ಷ ಕಿರಣ್, ಜೀ ಬಜಾರ್ ಮಹದೇವಪ್ಪ, ನಿರಂಜನ್ ರವಿ ಕೃಷ್ಣಮೂರ್ತಿ, ಮಹೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net