ದೇವಸ್ಥಾನದಲ್ಲಿ ಕನ್ನ, ಬೆಳ್ಳಿ ಮೂರ್ತಿ ಕಳವು

Published on

ಬಸವಕಲ್ಯಾಣ: ತಾಲೂಕಿನ ಬಗದೂರಿ ಗ್ರಾಮದಲ್ಲಿ ದೇವಸ್ಥಾನದಲ್ಲಿಯ ಬೆಳ್ಳಿ ಮೂರ್ತಿ ಹಾಗೂ ಹುಂಡಿಯಲ್ಲಿನ ಹಣ ಕಳವು ಮಾಡಿದ ಘಟನೆ ನಡೆದಿದೆ. ಗ್ರಾಮದ ವ್ಯಾಪ್ತಿಯ ಜಮೀನಿನಲ್ಲಿ ಇರುವ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಸೋಮವಾರ ನಸುಕಿನ ಜಾವ ಕಳ್ಳತನ ನಡೆದಿದೆ. ದೇವಸ್ಥಾನದ ಬೀಗ ಮುರಿದು ಅಂದಾಜು 38,250 ರೂ. ಮೌಲ್ಯದ 51 ತೊಲಾ ಬೆಳ್ಳಿ ಮೂರ್ತಿ ಹಾಗೂ ಹುಂಡಿಯಲಿದ್ದ 3 ಸಾವಿರ ರೂ. ಕಳವು ಮಾಡಲಾಗಿದೆೆ. ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net