ದೇವಸ್ಥಾನದ ಹುಂಡಿ ಮುರಿದು ನಗದು ಕಳವು

udp-theft
Published on

ಹಾಸನ: ಆಲೂರು ತಾಲೂಕಿನ ಕಣಿಗೆರೆ ಗ್ರಾಮದ ಆಡಿಬೈಲು ದೇವಸ್ಥಾನದ ಎಡಭಾಗದ ಬಾಗಿಲನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ಒಳ ನುಗ್ಗಿದ ಕಳ್ಳರು ಸ್ಟೀಲ್‌ನ ಕಾಣಿಕೆ ಹುಂಡಿಯನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ಹುಂಡಿಯಲ್ಲಿದ್ದ ಸುಮಾರು 5ರಿಂದ 6 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಅ.26ರ ಸಂಜೆ ಅರ್ಚಕರಾದ ನಾರಾಯಣ ಮತ್ತು ಪದ್ಮರಾಜು ಅವರು ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಸಂಜೆ 5.30ರ ಸಮಯದಲ್ಲಿ ದೇಗುಲದ ಬಾಗಿಲಿಗೆ ಬೀಗ ಹಾಕಿಕೊಂಡು ಬಂದಿದ್ದಾರೆ. ಅ.27ರಂದು ಬೆಳಗ್ಗೆ 8 ಗಂಟೆಗೆ ಅರ್ಚಕರು ಎಂದಿನಂತೆ ಪೂಜೆ ಮಾಡಲು ದೇವಸ್ಥಾನಕ್ಕೆ ಹೋಗಿದ್ದಾರೆ. ಈ ವೇಳೆ ಹುಂಡಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹಣ ಕದ್ದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ದೇವಾಲಯದ ಅಧ್ಯಕ್ಷರಾದ ಕಣಿಗೆರೆ ಗ್ರಾಮದ ನಿವಾಸಿ ಉಮೇಶ ಅವರು ಆಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net