ದೇವಸ್ಥಾನದ ಸುತ್ತುಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ

Published on

ಚಾಮರಾಜನಗರ: ನಗರದ 13 ಹಾಗೂ 14ನೇ ವಾರ್ಡಿನ ವ್ಯಾಪ್ತಿಗೆ ಬರುವ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿರುವ ಶ್ರೀಪಾರ್ವತಿ ದೇವಸ್ಥಾನದ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಗುದ್ದಲಿಪೂಜೆ ನೇರವೇರಿಸಿದರು.

ಬಳಿಕ ಮಾತನಾಡಿದ ಅವರು ನಗರ ಡಾ. ಬಿ.ಆರ್.ಅಂಬೇಡ್ಕರ್ ಬಡಾವಣೆಯ ಅಭಿವೃದ್ದಿಗೆ ನಗರಸಭೆ ಹಾಗೂ ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ಅನುದಾನವನ್ನು ನೀಡಲಾಗಿದೆ. ಈಗ ಇಲ್ಲಿನ ಯಜಮಾನರು, ನಿವಾಸಿಗಳು ಹಾಗೂ ನಗರಸಭೆ ಸದಸ್ಯರ ಮನವಿಯ ಮೇರೆಗೆ ಪಾರ್ವತಿ ದೇವಸ್ಥಾನದ ಅಭಿವೃದ್ದಿಗಾಗಿ ಕೆಆರ್‌ಐಡಿಎಲ್ ವತಿಯಿಂದ 7 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಗುಣಮಟ್ಟದ ಕಾಮಗಾರಿಯನ್ನು ನಿರ್ವಹಣೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು. ನಗರಸಭಾ ಸದಸ್ಯ ಚಿನ್ನಮ್ಮ, ಯಜಮಾನರುಗಳಾದ ನಾಗರಾಜು, ಮಂಜುನಾಥ್, ಶಿವಣ್ಣ, ಗುರುಸ್ವಾಮಿ, ಮಾಧು, ಗುತ್ತಿಗೆದಾರ ಮಹದೇವಸ್ವಾಮಿ, ಬಡಾವಣೆಯ ನಿವಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net