ದೇವಸ್ಥಾನದ ಜೀರ್ಣೊದ್ಧಾರಕ್ಕೆ ಕದಲೂರು ಉದಯ್ ನೆರವು : 2 ಲಕ್ಷ ರೂ. ಚೆಕ್ ನೀಡಿದ ಸಮಾಜ ಸೇವಕ

25KMD-1
Published on

ಮಂಡ್ಯ : ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರಿನ ಶ್ರೀ ಮಾರಮ್ಮ ದೇವಾಲಯದ ಜೀರ್ಣೊದ್ಧಾರ ಕಾರ್ಯಕ್ಕೆ ಸಮಾಜ ಸೇವಕ ಕದಲೂರು ಉದಯ್ ನೆರವು ನೀಡಿದರು. ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ 2 ಲಕ್ಷ ರೂ. ಚೆಕ್ ನೀಡಿದರು. ಗ್ರಾಮದ ರಾಮ ಮಂದಿರ ಸುಣ್ಣ ಬಣ್ಣದ ಖರ್ಚನ್ನು ಸಹ ವಹಿಸಿಕೊಂಡಿದ್ದಾರೆ.

ಬಳಿಕ ಮಾತನಾಡಿದ ಕದಲೂರು ಉದಯ್ ಅವರು, ಗ್ರಾಮದ 2 ದೇವಾಲಗಳ ಅಭಿವೃದ್ಧಿಗೆ ಕೊಟ್ಟ ಮಾತಿನಂತೆ ಧನಸಹಾಯ ಮಾಡಿದ್ದು, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದರು.

ಶ್ರೀ ಮಾರಮ್ಮ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದರಾಮು ಮಾತನಾಡಿ, ಗ್ರಾಮದ ಮುಖಂಡರು, ಸಮಾಜ ಸೇವಕ ಕದಲೂರು ಉದಯ್ ಅವರನ್ನು ಭೇಟಿ ಮಾಡಿ ದೇವಾಲಯ ಅಭಿವೃದ್ಧಿಗೆ ಧನಸಹಾಯ ಮಾಡಲು ಕೋರಿದ್ದೆವು. ಅದರಂತೆ ಶ್ರೀ ಮಾರಮ್ಮ ದೇವಾಲಯ ಅಭಿವೃದ್ಧಿಗೆ 2 ಲಕ್ಷ ರೂ. ನೀಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮುಖಂಡರಾದ ಚನ್ನಶೆಟ್ಟಿ, ಕುಮಾರ್, ಚಾಟಿ, ಸಿದ್ದೇಗೌಡ, ಬೋರೇಗೌಡ, ಶಿವರಾಮೇಗೌಡ, ಲೋಕೇಶ್, ಆನಂದ್, ಮನೋಹರ್, ಹರೀಶ್, ರಾಘವೇಂದ್ರ, ಅಜಿತ್ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net