

ಕೊಡೇಕಲ್: ಭಾವೈಕ್ಯತೆ ತಾಣವಾದ ಕೊಡೇಕಲ್ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಗಳ ಅಭಿವೃದ್ದಿಗೆ ಜಿಲ್ಲಾಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಬದ್ಧವಾಗಿದ್ದು, ಈ ಕಾರ್ಯಕ್ಕೆ ಸಮುದಾಯದ ಸಹಕಾರದ ಬಹಳ ಅಗತ್ಯವಾಗಿದೆ ಎಂದು ಜಿಲ್ಲಾ ಮುಜರಾಯಿ ಇಲಾಖೆ ಅಧಿಕಾರಿ ವಿಶ್ವನಾಥ ನಾಯಕ ಹೇಳಿದರು.
ಮಂಗಳವಾರ ಗ್ರಾಮದ ಪ್ಯಾಟಿ ಬಸವೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ದೇವಸ್ಥಾನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡಲಾಗುವುದು. ಭಕ್ತರಿಗೆ ಅನುಕೂಲವಾಗುವ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು.
ನಂತರ ಶ್ರೀ ವೃಷಭೇಂದ್ರ ಅಪ್ಪ ಮಾತನಾಡಿ, ಕಾಲಜ್ಞಾನಿ ಬಸವಣ್ಣನವರ ಕಾಲಾವಧಿಯಿಂದ ಈವರೆಗೆ ಹಲವು ವಿಶೇಷ ಸಂಪ್ರದಾಯ ಪದ್ಧತಿ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು ಈ ಹಿಂದಿನ ಪದ್ದತಿ, ಆಚರಣೆಗಳಿಗೆ ಧಕ್ಕೆಯಾಗದಂತೆ ಮೂಲಸೌಕರ್ಯ ಒದಗಿಸಬೇಕು ಎಂದರು.
ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಉಪತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ವಿಎ ದೀಪ್ತಿ ಚಕ್ರವರ್ತಿ, ಸಂಗಣ್ಣ ಮಹಲಿನಮಠ, ವೀರಸಂಗಪ್ಪ ಹಾವೇರಿ, ಸಿದ್ದಣ್ಣ ಎಂ.ಕೆ., ವಿರೇಶ ಮುತ್ತಗಿ, ದೇವಸ್ಥಾನದ ಪೂಜಾರಿಗಳಾದ ಪ್ರಭು ಪೂಜಾರಿ, ಸಾಂಬೂ ಪೂಜಾರಿ, ಮುದಕಣ್ಣ ಪೂಜಾರಿ, ಮಾನಪ್ಪ ಪೂಜಾರಿ, ಹಣಮಯ್ಯ ಕೆಂಡದ, ನಾಗು ದ್ಯಾಮನಾಳ, ಶರಣಯ್ಯ ಹೊಸಮಠ, ಸಂಗಣ್ಣ ಪಾಟೀಲ್ ಇತರರಿದ್ದರು.