ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಿ

22 KAMPLI 02
Published on

ಕಂಪ್ಲಿ: ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದಪ್ಪ ತಾತ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಮಾರ್ಗದಲ್ಲಿ ಸುಮಾರು 500 ಮೀ. ರಸ್ತೆ ತಗ್ಗುಗಳನ್ನು ಹೊಂದಿದೆ. ಮಳೆ ಬಂದಾಗ ಕೆಸರಿನ ಗದ್ದೆಯಂತಾಗುತ್ತದೆ. ಇದರಿಂದಾಗಿ ಮಳೆ ಬಂದಾಗ ಜನರಿಗೆ ತೊಂದರೆಯಾಗುತ್ತದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವಂತೆ ಪಿಡಿಒ, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ದೇವರ ಗಂಗೆಸ್ಥಳ, ಪೀರಲು ದೇವರ ಸವಾರಿ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳ ಮೆರವಣಿಗೆಗೆ ತೊಂದರೆಯಾಗುತ್ತಿದೆ. ತುರ್ತಾಗಿ ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಗ್ರಾಮಸ್ಥರಾದ ಬಡಿಗೇರ ಗಂಗಮ್ಮ, ಕೆ.ವಸಂತಮ್ಮ, ಮಾರೆಮ್ಮ, ಜೆ.ಪ್ರಕಾಶ, ಬಿ.ಶಿವಪ್ಪ, ವಿಠ್ಠಲಾಪುರ ಸಿದ್ದಪ್ಪ, ಕೆ.ದೊಡ್ಡಬಸಪ್ಪ, ಎಸ್.ಈರೇಶಪ್ಪ, ಬಿ.ಕೆ.ಪಂಪಾಪತಿ, ಜೆ.ಬಸವರಾಜ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net