ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ!

1Huk1B
ಸಂಕೇಶ್ವರ ಪಟ್ಟಣದ ಲಕ್ಷಿ$್ಮನಾರಾಯಣ ದೇವಸ್ಥಾನ ಮಳೆಗಾಲದಲ್ಲಿ ಸೋರುವುದರಿಂದ ಪ್ಲಾಸ್ಟಿಕ್​ ಹೊದಿಕೆ ಹೊದಿಸಿರುವುದು.
Published on

ಬಾಬು ಸುಂಕದ ಹುಕ್ಕೇರಿ
ಸವದತ್ತಿಯ ರಟ್ಟರಸರ ಆಳ್ವಿಕೆಯಲ್ಲಿ ರಾಜಧಾನಿಯಾಗಿದ್ದ ಸಂಕೇಶ್ವರ ಪಟ್ಟಣದ ಕ್ರಿ.ಶ.8ನೆಯ ಶತಮಾನದ ಅವಧಿಯ ಲಕ್ಷಿ$್ಮ ನಾರಾಯಣ ದೇವಸ್ಥಾನದ ಗರ್ಭಗುಡಿಯ ದಕ್ಷಿಣ ಭಾಗದಲ್ಲಿರುವ ಶಿಲಾಬಾಲಿಕೆಯು ಕೈಯಲ್ಲಿ ಬಳಪ ಹಿಡಿದು ಶಾಸನ ಬರೆಯುವ ಭಂಗಿಯ ಸುಕನಾಸಿ ಶಿಲಾಮೂರ್ತಿ ಇದೆ. ಈ ಶಿಲಾಮೂರ್ತಿ ಕರ್ನಾಟಕದಲ್ಲಿ ಎರಡನೆಯದ್ದಾಗಿದೆ. ಈ ದೇವಸ್ಥಾನವೊಂದು ಟಿಕಾ ಸ್ಥಾನವಾಗಿತ್ತು. ಅಲ್ಲದೆ ವಿದ್ಯಾಕೇಂದ್ರವೂ ಅಗಿದ್ದನ್ನು ಶಾಸನಗಳು ಉಲ್ಲೇಖಿಸಿವೆ.

ಪಟ್ಟಣದ ಸುತ್ತ ಒಂದು ಬೃಹತ್​ ಕೋಟೆ, ಅರಮನೆಯ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ಕ್ರಿ.ಶ. 10 ನೆಯ ಶತಮಾನದ ನಕ್ಷತ್ರಾಕಾರದ ಒಂದು ಜೈನ ಬಸದಿ, ಕ್ರಿ.ಶ. 11ನೆಯ ಶತಮಾನದ ಶಂಕರಲಿಂಗ ದೇವಾಲಯ ಮತ್ತು ಲಕ್ಷಿ$್ಮ ನಾರಾಯಣ ದೇವಾಲಯಗಳು ಸವದತ್ತಿ ರಟ್ಟರಸರ ಕಾಲದಲ್ಲಿ ನಿಮಾರ್ಣವಾಗಿವೆ.

ಲಕ್ಷಿ$್ಮ ನಾರಾಯಣ ದೇವಾಲಯವು 24 ಅಗಲ 20 ಅಡಿ ಎತ್ತರದ ಪೂರ್ವಾಭಿಮುಖವಾದ ಗರ್ಭಗೃಹ, ಕಡಿದಾದ ಸುಕನಾಸಿ, ತ್ರಿಕೂಟ ಮುಖಮಂಟಪದಿಂದ ಕೂಡಿದ್ದು, ಗರ್ಭಗ್ರಹ ಹೊರಗಿನ ಭಾಗವು ನಕ್ಷತ್ರಾಕಾರವಾಗಿದೆ. ಇಲ್ಲಿರುವ ಮೂರೂ ದೇವಾಲಯಗಳು ನಕ್ಷತ್ರಾಕಾರವಾಗಿದ್ದು, ಸುಂದರವಾದ ಕೆತ್ತನೆಯಿಂದ ಕೂಡಿವೆ. ದಕ್ಷಿಣದ ಹೊರಗೋಡೆಯಲ್ಲಿ ಲಿಪಿ ಬರಹಗಾರ್ತಿ ಶಿಲಾಬಾಲಿಕೆ ಮೂರ್ತಿ ಕೆತ್ತಲಾಗಿದೆ.

ಡಾ.ಬಿ.ಆರ್​.ಹಂದೂರ ಮತ್ತು ಡಾ.ಶಿ.ಬಾ.ಪಾಟೀಲ ಅವರು ಈ ದೇವಾಲಯದ ಸುಕನಾಸಿಯ ಶಾಸನಗಳನ್ನು ಕಂಡು ಹಿಡಿದವರು. ಶ್ರೀಮತಿ ಹನುಮಾಕ್ಷಿ ಗೋಗಿ ಅವರು ಶಾಸನ ಪಾಠ ಓದಿದ್ದಾರೆ. ಶಾಸನಗಳು ಕ್ರಿ.ಶ 11 ನೇ ಶತಮಾನದ ಸವದತ್ತಿ ರಟ್ಟಸರ ಕಾರ್ತವೀರ್ಯನ ಕಾಲದ್ದಾಗಿವೆ. ಇದು ಇಪ್ಪತೈದು ಸಾಲುಗಳ ಹಳಗನ್ನಡದ ಶಾಸನ. ನರಸಿಂಹ ದೇವಾಲಯದ ಪೂಜಾರ್ಚನೆಗೆ ರಟ್ಟರಸರು ನಾರಾಯಣ ದೇವಾಲಯದ ಪೂಜೆಗೆ ಹೊಂಗಲ, ಗುತ್ತಲ ಎಂಬ ಊರಿನವರಾದ ಪನ್ನಿಶೆಟ್ಟಿ, ಸಾತಿಸೆಟ್ಟಿ, ಆದಿಶೆಟ್ಟಿ, ವಾಫ್ಟಿಸೆಟ್ಟಿ, ಹಲಿಸೆಟ್ಟಿ, ಜಾಯಿಸೆಟ್ಟಿ, ಬಮ್ಮಿಸೆಟ್ಟಿ, ಪಾರಿಸೆಟ್ಟಿ, ನಾಗಿಸೆಟ್ಟಿ, ಬೆಳ್ಲೆಯಮಸೆಟ್ಟಿ, ಕೇತಿಶೆಟ್ಟಿ, ಹೊಟ್ಟೆಶೆಟ್ಟಿ, ಕನ್ನಿಸೆಟ್ಟಿ, ರೇವಿಸೆಟ್ಟಿ, ಗುಡ್ಡಿಸೆಟ್ಟಿ, ಯೀಶ್ವರಸೆಟ್ಟಿ, ಮೊದಲಾದವರು ಹಣದಾನ, ಅಡಕೆ, ಮುಂತಾದ ಬೆಳೆಗಳನ್ನು ಗದ್ಯಾಣಗಳನ್ನು ಹಾಗೂ ಈ ದೇವಾಲಯದ ಪೂಜೆಯನ್ನು ಸರಾಗವಾಗಿ ನೆರವೇರಿಸಲು ಸಾಕಷು ದಾನಗಳನ್ನು ಮಾಡಿದ್ದಾರೆ.

ದೇವಸ್ಥಾನದ ದುರವಸ್ಥೆ: ಐತಿಹಾಸಿಕ ದಾಖಲೆಯ ದೇವಸ್ಥಾನ ಇದೀಗ ಹಾಳಾಗುತ್ತಿದೆ. ಮಳೆಗಾಲದಲ್ಲಿ ದೇವಸ್ಥಾನ ಸೋರುವುದರಿಂದ ಶಿಥಿಲಾವಸ್ಥೆಗೆ ತಲುಪಿದೆ. ಕಿಡಿಗೇಡಿಗಳಿಂದ ಶಾಸನ ಹಾಗೂ ಸುಂದರ ಕೆತ್ತನೆಯ ಗೋಡೆಗಳು, ಕಂಬಗಳು ನಾಶವಾಗುತ್ತಿವೆ. ಈ ದೇವಸ್ಥಾನವನ್ನು ಪ್ರಾಚ್ಯವಸ್ತು ಇಲಾಖೆ ಸುಪರ್ದಿಗೆ ಪಡೆದುಕೊಂಡು ಸಂರಕ್ಷಿಸಬೇಕು. ಶಾಸನಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಐತಿಹಾಸಿಕ ದಾಖಲೆ ಮಾಡಬೇಕೆಂಬುದು ಇತಿಹಾಸಕಾರರು ಮತ್ತು ಸಾಹಿತಿಗಳ ಅಭಿಮತವಾಗಿದೆ.

ನಾಲ್ಕು ಶಾಸನಗಳು: ಸುಂದರವಾದ ಶಿಲಾಬಾಲಿಕೆ ಬರೆದ ನಾಲ್ಕು ಶಾಸನದ ಪಾಠ ಹೀಗಿದೆ. 1.ಎಯುಕ್ತಿ ಕರ್ಮಹೀನಸ್ಯ 2.ಹ್ಮಣೇನ ಪೂಜೆತೆ ಸಾ ಪ್ರ 3.ಹೀನೋ ಕುಲೀನಸ್ಯ ವಿಪ್ರ ಕೊ 4.ಪ ನ ಪೂಜಎತೆ ಎಂಬ ಶಾಸನಗಳಿವೆ.

ಕ್ರಿ.ಶ 8ನೇ ಶತಮಾನದ ದೇವಸ್ಥಾನ ಮತ್ತು ಇಲ್ಲಿರುವ ಶಿಲಾ ಶಾಸನಗಳನ್ನು ರಕ್ಷಿಸಬೇಕು. ನಾನು ಈ ಶಾಸನಗಳನ್ನು ನೋಡಿದಾಗ ಆಶ್ಚರ್ಯನಾದೆನು. ಶಾಸನಗಳ ಅಧ್ಯಯನದ ನಂತರ ಅಪರೂಪದ ದಾಖಲೆ ಇದಾಗಿದೆ ಎಂದು ಅನಿಸಿತು.ಆದರೆ ಈ ಶಾಸನ ಮತ್ತು ದೇವಸ್ಥಾನದ ದುರವಸ್ಥೆ ಕಂಡು ಮನಸ್ಸಿಗೆ ತುಂಬಾ ನೋವಾಗಿದೆ. ಸರ್ಕಾರ ಇದರತ್ತ ಗಮನಹರಿಸಿ ಪ್ರಾಚ್ಯವಸ್ತು ಸಂಗ್ರಹ ಇಲಾಖೆಗೆ ವಹಿಸಿ ಕಾಪಾಡಬೇಕೆಂಬುದು ನನ್ನ ಅನಿಸಿಕೆ. `ಡಾ.ಬಿ.ಆರ್​.ಹಂದೂರ, ಇತಿಹಾಸ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net