ದೇವಸ್ಥಾನಕ್ಕೆ ನುಗ್ಗಿ ಹಣ, ಬೆಳ್ಳಿ ಪದಾರ್ಥಗಳ ಕಳವು

Published on

ಶನಿವಾರಸಂತೆ: ಇಲ್ಲಿನ ಮುಳ್ಳೂರು ಗ್ರಾಮದ ಎರಡು ದೇವಸ್ಥಾನಗಳಿಗೆ ನುಗ್ಗಿರುವ ಕಳ್ಳರು ದೇವಸ್ಥಾನವೊಂದರ ಹುಂಡಿಯಲ್ಲಿದ್ದ ಹಣ ಮತ್ತು ದೇವರ ವಿಗ್ರಹಕ್ಕೆ ಹಾಕಲಾಗಿದ್ದ ಬೆಳ್ಳಿಯ ಆಭರಣಗಳನ್ನು ಬುಧವಾರ ರಾತ್ರಿ ಕಳವು ಮಾಡಿದ್ದಾರೆ.


ಗ್ರಾಮದ ಶ್ರೀ ಕಾಳಿಕಾಂಬ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನಗಳ ಬಾಗಿಲು ಒಡೆದು ನುಗ್ಗಿರುವ ಶ್ರೀ ಕಾಳಿಕಾಂಬ ದೇವಸ್ಥಾನದ ಹುಂಡಿಯಲ್ಲಿದ್ದ 5 ಸಾವಿರ ರೂ.ಗಳಿಗಿಂತ ಹೆಚ್ಚಿನ ಹಣ, ದೇವಿಯ ವಿಗ್ರಹಕ್ಕೆ ತೊಡಿಸಿದ್ದ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ.


ನಂತರ ಪಕ್ಕದ ಬಸವೇಶ್ವರ ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು ದೇವಸ್ಥಾನದಲ್ಲಿ ಕಳವು ಮಾಡಲು ಯತ್ನಿಸಿದ್ದಾರೆ. ಈ ಕುರಿತು ಗುರುವಾರ ಗ್ರಾಮದ ಉಭಯ ದೇವಸ್ಥಾನ ಸಮಿತಿಯ ಪ್ರಮುಖರು ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನ ದಳ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಶೋಧ ನಡೆಸಿದ್ದಾರೆ. ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net