ದೇವಸ್ಥಾನ ಇರುವ ಊರು ಸಂಪದ್ಭರಿತ : ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

1
Published on

ಕನಕಪುರ: ದೇವಾಲಯಗಳು ಮನುಷ್ಯನಿಗೆ ಶಾಂತಿ, ನೆಮ್ಮದಿ ನೀಡುವ ಪುಣ್ಯಸ್ಥಳಗಳಾಗಿವೆ. ಊರಿಗೊಂದು ವನ ಹಾಗೂ ದೇವಾಲಯ ಇದ್ದರೆ, ಆ ಊರು ಸಂಪದ್ಭರಿತವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಯಡಮಾರನಹಳ್ಳಿ ಸಿದ್ದಪ್ಪಾಜಿ ಹಾಗೂ ತಗಡಪ್ಪಸ್ವಾಮಿ ಧಾಮಿರ್ಕ ೇತ್ರ ಎನಿಸಿರುವ ಯಡಮಾರನಹಳ್ಳಿಯಲ್ಲಿ ಸೋಮವಾರ ನನೀಲ ಸಿದ್ದಪ್ಪಾಜಿ ಹಾಗೂ ವಿವಿಧ ದೇವಾಲಯಗಳ ರಾಜಗೋಪುರ, ಕಳಸಾರೋಹಣ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಈಗಿನ ತಂತ್ರಜ್ಞಾನದ ಭರಾಟೆಯಲ್ಲಿ ಮನುಷ್ಯ ದೇವಸ್ಥಾನ, ದೇವತಾ ಕಾರ್ಯಗಳನ್ನು ಮರೆಯುವ ಸ್ಥಿತಿಗೆ ತಲುಪಿದ್ದಾನೆ. ಇದರಿಂದಾಗಿ ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ ಎಂದರು.

ಭಾರತ ಹಲವು ಧರ್ಮಗಳ ತವರೂರು: ಧಾಮಿರ್ಕ ಪರಂಪರೆಯ ಮೂಲಕ ಭಾರತ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ. ಸಂತರು, ಆಧ್ಯಾತ್ಮಿಕ ಗುರುಗಳು ಹಾಗೂ ಧಾಮಿರ್ಕ ಗುರುಗಳು ಅಹಿಂಸೆ, ಶಾಂತಿ ತತ್ವವನ್ನು ಲೋಕಕ್ಕೆ ಬೋಧಿಸುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ನಾಡಿಗೆ ಗೌರವ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಆದಿಚುಂಚನಗಿರಿ ಶ್ರೀಗಳು ಹೇಳಿದರು.

ದೇವರು ಕೊಟ್ಟ ಅವಕಾಶ ಬಳಸಿಕೊಳ್ಳಿ: ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಿ.ಕೆ. ಶಿವಕುಮಾರ್​ ಮಾತನಾಡಿ, ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ದೇವರು ಕೊಟ್ಟಿರುವ ಅವಕಾಶವನ್ನು ಸರಿಯಾದ ರೀತಿ ಬಳಸಿಕೊಂಡು ಧರ್ಮ ಉಳಿಸುವ ಕೆಲಸ ಮಾಡಬೇಕಿದೆ ಎಂದರು. ದುಃಖ ದೂರಮಾಡಲು ದೇವರ ಪೂಜೆ ಮಾಡಬೇಕು. ಭಕ್ತನಿಗೂ&ಭಗವಂತನಿಗೂ ಸಂದಿಸುವ ಸ್ಥಳ ದೇವಾಲಯ. ಇಂಥ ಭವ್ಯ ದೇಗುಲ ನಿರ್ಮಾಣವಾಗಿದೆ. ಇಂಥ ಧಾಮಿರ್ಕ ಕಾರ್ಯಗಳನ್ನು ಹೆಚ್ಚೆಚ್ಚು ನಡೆಸಿ, ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಭಕ್ತಿಭಾವವನ್ನು ಹೆಚ್ಚಿಸುವ ಜ್ಞಾನದೇಗುಲಗಳು ಇವಾಗಬೇಕು ಎಂದು ಹೇಳಿದರು.

ಮರಳೇಗವಿ ಮಠದ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ನಮ್ಮ ಆಧ್ಯಾತ್ಮಿಕ, ಧಾಮಿರ್ಕ ಪರಂಪರೆ ಹಾಗೂ ದೇಶದ ಸಂಸತಿಯನ್ನು ಮುಂದಿನ ತಲೆಮಾರಿಗೆ ಕಾಪಾಡಿಕೊಳ್ಳಲು ಇಂಥ ದೇವಾಲಯಗಳ ಅವಶ್ಯಕತೆ ಇದೆ. ಈ ಗ್ರಾಮಕ್ಕೆ ಮತ್ತು ಮರಳೇಗವಿ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನತೆ ಮಠಕ್ಕೆ ದಾನ&ಧರ್ಮ ಮಾಡಿದ್ದಾರೆ. ಸಿದ್ದಪ್ಪಾಜಿ ಸೇರಿ ಅನೇಕ ದೇಗುಲಗಳ ನಿಮಿರ್ಸಿರುವುದು ನಮ್ಮ ಸಂಸತಿಯ ಪ್ರತಿಕವಾಗಿದೆ ಎಂದರು.

ಶಿವಗಿರಿ ೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಯಡಮಾರನಹಳ್ಳಿ ನನಗೆ ಜನ್ಮಕೊಟ್ಟ ೇತ್ರವಾಗಿದೆ. ಆದರೆ, ಸನ್ಯಾಸಿಯಾಗಿ ಆಧ್ಯಾತ್ಮಿಕ, ಧಾಮಿರ್ಕ, ಶೈಕ್ಷಣಿಕ ೇತ್ರದಲ್ಲಿ ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದದಲ್ಲಿ ಅವರ ೇತ್ರದಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇನೆ. ಈ ಎಲ್ಲ ಕೀತಿರ್ ಈ ನೆಲಕ್ಕೆ ಸಲ್ಲುತ್ತದೆ. ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ದರ್ಶನದಿಂದ ಗ್ರಾಮ ಇಂದು ಪುನೀತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದೇಗುಲಮಠದ ಕಿರಿಯಶ್ರೀ ಚನ್ನಬಸವ ಸ್ವಾಮೀಜಿ, ತೋಟಹಳ್ಳಿ ಬಸವಪ್ರಭು ಸ್ವಾಮೀಜಿ, ಐಪಿಎಸ್​ ಅಧಿಕಾರಿ ಮುತ್ತುರಾಜ್​, ತಾಪಂ ಮಾಜಿ ಅಧ್ಯಕ್ಷರಾದ ನಾಗಣ್ಣ, ಎಚ್​.ಕೃಷ್ಣಪ್ಪ, ಭೈರೇಗೌಡ, ಊರಗೌಡ ಮರಿಯಪ್ಪ, ಶಿವರಾಮು, ಸಿದ್ದಪ್ಪಾಜಿ ದೇವಾಲಯದ ಪ್ರಧಾನ ಅರ್ಚಕ ಸಿದ್ದರಾಜು, ದೇವಾಲಯ ಟ್ರಸ್ಟ್​ ಅದ್ಯಕ್ಷ ಕರಿಯಪ್ಪ, ಕಾರ್ಯದಶಿರ್ ತಮ್ಮಣ್ಣ, ಮುಖಂಡರಾದ ವೈ.ಕೆ. ಜಯರಾಮ್​, ಶಿವ, ರಾಮಭದ್ರೇಗೌಡ, ಜಗದೀಶ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net