ದೇವಸ್ಥಾನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

7 HBD 1
 ಚಿಟಗುಪ್ಪ ತಾಲೂಕಿನ ರಾಂಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಧರ್ಮಸಭೆಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಸೊಲ್ಲಾಪುರದ ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಪ್ರಮುಖರಾದ ಬಸವಂತರಾಯ ದೇಶಮುಖ ಚಿಟಗುಪ್ಪ, ವಿಶ್ವನಾಥ ಪಾಟೀಲ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ್ ಬೇಳಕೇರಾ ಇತರರಿದ್ದರು.
Published on

ಚಿಟಗುಪ್ಪ: ರಾಂಪುರದಲ್ಲಿ ಶ್ರೀರಾಮ ತಂಗಿರುವ ಹಿನ್ನೆಲೆಯಲ್ಲಿ ಶ್ರೀರಾಮ ಮಂದಿರ ಅಪಾರ ಭಕ್ತಾಧಿಗಳನ್ನು ಹೊಂದಿದ್ದು, ದೇವಸ್ಥಾನದ ಅಭಿವೃದ್ಧಿಗೆ ಪ್ರಾಮಾಣಿತೆಯಿಂದ ಶ್ರಮಿಸುವುದಾಗಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭರವಸೆ ನೀಡಿದರು.

ತಾಲೂಕಿನ ರಾಂಪೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಂದಿರದಲ್ಲಿ ಭಾನುವಾರ ಶ್ರೀರಾಮ ನವಮಿ ನಿಮಿತ್ತ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರೋತ್ಸವದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರು ಹೇಳುವಂತೆ ಶ್ರೀ ರಾಮನ ಹೆಸರಿನಲ್ಲಿರುವ ರಾಂಪುರಕ್ಕೆ ಶ್ರೀರಾಮನು ಬಂದು ನೆಲೆಸಿ ಲಿಂಗ ಪ್ರತಿಷ್ಠಾಪನೆ ಮಾಡಿದ್ದರು ಎನ್ನುವ ಇತಿಹಾಸವಿದೆ. ಹೀಗಾಗಿ ರಾಜ್ಯ ಸೇರಿದಂತೆ ಮಹಾರಾಷ್ಟç, ತೆಲಗಾಂಣ ಭಕ್ತರಿಗೆ ಶ್ರೀ ರಾಮಲಿಂಗೇಶ್ವರರು ಮನೆಯ ದೇವರಾಗಿರುವುದು ವಿಶೇಷ. ಪ್ರತಿಯೊಬ್ಬರೂ ಶ್ರೀರಾಮನ ತತ್ವಾದರ್ಶ ಮೈಗೊಡಿಸಿಕೊಳ್ಳಬೇಕೆಂದು ಹೇಳಿದರು.

ತಮ್ಮೆಲ್ಲರ ಹಾಗೂ ದೇವರ ಆರ್ಶಿವಾದಿಂದ ಶಾಸಕನಾಗಿದ್ದು, ನಿಮ್ಮ ಸೇವಕನಾಗಿ ಕೆಲಸ ಮಾಡುವೆ. ದೇವಸ್ಥಾನಕ್ಕೆ ಗ್ರಾಮದಿಂದ ಸಿಸಿ ರಸ್ತೆ ಹಾಗೂ ಮಂದಿರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಹಲಬರ್ಗಾದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರೀರಾಮನು ಇಲ್ಲಿ ಕೆಲ ಕಾಲ ತಂಗಿದ್ದರಿAದ ಇದು ಪುಣ್ಯಕ್ಷೇತ್ರವಾಗಿದೆ. ಮರ್ಯಾದೆ ಪುರುಷ ಶ್ರೀರಾಮನ ತತ್ವಗಳನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಂಸಾರ, ಕುಟುಂಬ, ಸಾಮಾಜ, ದೇಶ ಒಳ್ಳೆಯ ದಾರಿಯಲ್ಲಿ ಸಾಗುವುದರಲ್ಲಿ ಎರಡು ಮಾತಿಲ್ಲವೆಂದು ಹೇಳಿದರು.

ಹುಡಗಿ ಹಿರೇಮಠ ಸಂಸ್ಥಾನದ ಭಾವಿ ಪೀಠಾಧಿಪತಿ ಶ್ರೀ ನಾಗಯ್ಯ ದೇವರು, ಮಹಾರಾಷ್ಟ್ರ ಸೊಲ್ಲಾಪುರದ ಮಾಜಿ ಶಾಸಕ ವಿಶ್ವನಾಥ ಚಾಕೋತೆ, ದೇವಾಲಯದ ಅಧ್ಯಕ್ಷ ಡಾ.ಸುರೇಶ ಮಾಶೆಟ್ಟಿ , ಪ್ರಮುಖರಾದ ಬಸವಂತರಾಯ ದೇಶಮುಖ ಚಿಟಗುಪ್ಪ, ವಿಶ್ವನಾಥ ಪಾಟೀಲ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ್ ಬೇಳಕೇರಾ, ಗಣಪತಿ ಗಿರಿಗಿರಿ, ಸಂತೋಷ ಸ್ವಾಮಿ, ಮಧುಸೂಧನ ಪಾಟೀಲ, ಕಿರಣ ಮಾನಕಾರೆ, ನಿಜಲಿಂಗ ಕಳ್ಳಿಮಠ, ಪ್ರೇಮ ನೆಲವಾಳ, ರೋಹಿತ ನೆಲವಾಳ, ಭೀಮಣ್ಣ ಮುದ್ದ ಇತರರಿದ್ದರು.

ಜಾತ್ರೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಬೆಳಗ್ಗೆ ಕುಂಭ ಮೆರವಣಿಗೆ, ರುದ್ರಾಭಿಷೇಕ ಪೂಜೆ ನಂತರ ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಂಜೆ ಬೀದರ್‌ನ ನಾಟ್ಯಶ್ರೀ ನೃತ್ಯಾಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಧರ್ಮಸಭೆ ನಂತರ ಶ್ರೀ ರಾಮಲಿಂಗೇಶ್ವರ ತೊಟ್ಟಿಲು ಕಾರ್ಯಕ್ರಮ ವಿಶೇಷವಾಗಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net