

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿಯ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಮಾಲಾಧಾರಿಗಳು ಗ್ರಾಮದ ಆರಾಧ್ಯ ದೈವ ಶ್ರೀಗುರು ಮುದ್ದಿ ಬಸವೇಶ್ವರ ಸ್ವಾಮಿ ದೇಗುಲದ ಅಭಿವೃದ್ಧಿಗೆ ಶನಿವಾರ 50 ಸಾವಿರ ರೂ.ದೇಣಿಗೆ ನೀಡಿದರು.
ಬಳಿಕ ದೇಗುಲದ ಸಮಿತಿಯ ಅಧ್ಯಕ್ಷ ನೆರೆಗಲ್ ಕೊಟ್ರೇಶ ಮಾತನಾಡಿ, ಶ್ರೀ ಮುದ್ದಿಬಸವೇಶ್ವರ ಸ್ವಾಮಿ ದೇಗುಲದ ಅಭಿವೃದ್ಧಿಗೆ ಶಾಸಕ ಕೆ.ನೇಮಿರಾಜ ನಾಯ್ಕ ದೇಗುಲದ ಸಂಪೂರ್ಣ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಭಕ್ತರು ಸ್ವಯಂ ಪ್ರೇರಿತರಾಗಿ ನೀಡುವ ದೇಣಿಗೆಯು ಕಾಮಗಾರಿ ಆರಂಭಿಸಲು ಸಹಕಾರಿಯಾಗಿದೆ ಎಂದರು.
ಶ್ರೀಗುರು ಕೊಟ್ಟೂರೇಶ್ವರ ಮಾಲಾಧಾರಿಗಳಾದ ಗ್ರಾಪಂ ಉಪಾಧ್ಯಕ್ಷ ಕೆ.ಮಂಜುನಾಥ, ಎಸ್.ಎಸ್.ಕೊಟ್ರಯ್ಯಸ್ವಾಮಿ, ಕಮ್ಮಾರ ಗಣೇಶ, ಚಿನಿವಾಲರ ಕೊಟ್ರೇಶ, ಉಪ್ಪಾರ ಬಸವರಾಜ, ಈಶಪ್ಪ, ಎಸ್.ಎಂ.ನಾಗಯ್ಯ, ಬಾರಿಗಿಡ ಸಿದ್ದೇಶ, ದೊಡ್ಡಬಸಯ್ಯ ಇತರರಿದ್ದರು.