ದೇವರಾಜ್‌ಅರಸ್ ಶಿಕ್ಷಣ ಸಂಸ್ಥೆಯ ‘ಡೆಸ್ಟಿನಿ’ಅದ್ದೂರಿ ಸಮಾರೋಪ

PHOTO-02--08
Published on

ಚಿತ್ರದುರ್ಗ: ನಗರದ ಡಿ.ದೇವರಾಜ್‌ಅರಸ್ ಶಿಕ್ಷಣ ಸಂಸ್ಥೆ 40ನೇ ಶೈಕ್ಷಣಿಕ ವಾರ್ಷಿಕೋತ್ಸವ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ಸಂಸ್ಥೆ ಆವರಣ ದಲ್ಲಿ ಆಯೋಜಿಸಿದ್ದ ‘ಡೆಸ್ಟಿನಿ-2023’ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ತೆರೆಕಂಡಿತು.
ಮೊದಲ ದಿನ ಡಿ.21ರಂದು ಚಿಕ್ಕಮಗಳೂರು ಗೌರಿಗದ್ದೆ ಅವಧೂತಾಶ್ರಮದ ಶ್ರೀ ವಿನಯ್‌ಗುರೂಜಿ ಅವರು ಕಾರ‌್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಂದು ಸುಧಾಬರಗೂರು, ಪ್ರಹ್ಲಾದ್‌ಜೋಶಿ, ಮಿಮಿಕ್ರಿ ಗೋಪಿ ಹಾಗೂ ರಾಘವೇಂದ್ರ ಆಚಾರ್ಯ ಅವರ ಹಾಸ್ಯ ಕಾರ‌್ಯ ಕ್ರಮ ಪ್ರೇಕ್ಷಕರ ಮನಸೂರೆಗೊಂಡಿತ್ತು.
ಶುಕ್ರವಾರ ಸಂಗೀತ ನಿರ್ದೇಶಕ ಅರ್ಜುನ್‌ಜನ್ಯ ಅವರು ತಮ್ಮ ಗಾಯನ ಮೋಡಿಯಿಂದ ಪ್ರೇಕ್ಷಕರನ್ನು ಸೆಳೆದರೆ ಹಾಗೂ ಶನಿವಾರ ಚ ಂದನ್‌ಶೆಟ್ಟಿ ಅವರು ಮ್ಯೂಸಿಕಲ್ ಕನ್ಸ್‌ರ್ಟ್‌ಗೆ ಪ್ರೇಕ್ಷಕರು ಮನಸೋತರು. ಮನಮೋಹಕವಾಗಿದ್ದ ಭಾನುವಾರದ ಡಿಜೆ ನೈಟ್‌ನೊಂದಿಗೆ ಡೆಸ್ಟಿನಿ ಕಾರ‌್ಯಕ್ರಮ ಅದ್ದೂರಿಯಿಂದ ಸಮಾಪನಗೊಂಡಿತು.
ಕಾರ‌್ಯಕ್ರಮಕ್ಕಾಗಿ ಶಿಕ್ಷಣಸಂಸ್ಥೆ ಕಟ್ಟಡವನ್ನು ವಿದ್ಯುತ್‌ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಸ್ಥೆ ಸ್ಥಾಪಕ ಕಾರ‌್ಯದರ್ಶಿ, ಹೊ ಳಲ್ಕರೆ ಶಾಸಕ ಡಾ.ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಎಚ್.ಚಂದ್ರಕಲಾ,ಸಿಇಒ ಎಂ.ಸಿ.ರಘುಚಂದನ್ ಅವರ ನೇತೃತ್ವದಲ್ಲಿ ಕಾರ‌್ಯಕ್ರಮ ಯ ಶಸ್ವಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net