

ಹಾಸನ: ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಕೀಲ ಜಿ.ದೇವರಾಜೇಗೌಡರ ಎಸ್‌ಐಟಿ ಅಧಿಕಾರಿಗಳ ಕಸ್ಟಡಿ ಸೋಮವಾರ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ. ನಂತರ ಜಿಲ್ಲಾ ಕಾರಾಗೃಹಕ್ಕೆ ಬಿಡಲಾಯಿತು.
ಅತ್ಯಾಚಾರ ಪ್ರಕರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದ ದೇವರಾಜೇಗೌಡರನ್ನು ಎಸ್‌ಐಟಿ ಅಧಿಕಾರಿಗಳು ಆಶ್ಲೀಲ್ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮೂರು ದಿನ ವಶಕ್ಕೆ ಪಡೆದಿದ್ದರು.
ಭಾರಿ ಭದ್ರತೆಯಲ್ಲಿ ದೇವರಾಜೇಗೌಡರನ್ನು ಕೋರ್ಟ್‌ಗೆ ಕರೆತಂದಿದ್ದ ಎಸ್‌ಐಟಿ ತಂಡ ಹಾಸನದ ಐದನೇ ಅಧಿಕ ಸಿವಿಲ್ ನ್ಯಾಯಾಲಯದ ಎದುರು ಹಾಜರುಪಡಿಸಿತು.ಮತ್ತೆ ತನಿಖ ತಂಡ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳದ ಕಾರಣ ಮೇ 24ರವರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾ ಕಾರಾಗೃಹಕ್ಕೆ ಕರಡದುಕೊಂಡು ಹೋಗಲಾಯಿತು.
ಅತ್ಯಾಚಾರ ಪ್ರಕರಣದಲ್ಲಿ ಜಿ.ದೇವರಾಜೇಗೌಡರ ಹೊಳೆನರಸೀಪುರ ಪೊಲೀಸರು ಬಂಧಿಸಿ ವಿಚಾರಣೆ ನಡಸಿ ನಂತರ ನ್ಯಾಯಾಲಯದ ಹಾಜರುಪಡಿಸಿ ನಂತರ ಮೇ24ರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.ಈ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳು ಮೂರು ದಿನ ತಮ್ಮ ಕಸ್ಟಡಿಗೆ ಪಡೆದುಕೊಂದು ಹೆಚ್ಚನ ವಿಚಾರಣೆ ನಡೆಸಿದರು.
ಎಸ್‌ಟಿಟಿ ವಶಕ್ಕೆ ಪಡೆಯುವಾಗ ಸುದ್ದಿಗಾರರೊಂದಿಗೆ ಸ್ಪೋಟಕ ವಿಷಯಗಳನ್ನು ಮಾತನಾಡಿ ಸಂಚಲನ ಸೃಷ್ಟಿಸಿದ್ದ ದೇವರಾಜೇಗೌಡ ಅವರ ಭದ್ರತೆಗೆ ಪೊಲೀಸರು ಹೆಚ್ಚು ಜಾಗ್ರತೆ ವಹಿಸಿದ್ದರು. ಅವರು ನ್ಯಾಯಾಲಯದೊಳಗೆ ಹೋಗುವಾಗ, ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಹಾಗೂ ಜೈಲಿಗೆ ಹೋಗುವಾಗ ಮಾಧ್ಯಮದವರ ಸಂಪರ್ಕಕ್ಕೆ ಬಾರದಂತೆ ಪೊಲೀಸ್ ತಂಡ ಸುತ್ತುವರಿದಿತ್ತು.