ದೇವರಾಜೇಗೌಡ ಇನ್ನೂ ಎರಡು ದಿನ ಎಸ್‌ಐಟಿ ಕಸ್ಟಡಿಗೆ

ದೇವರಾಜೇಗೌಡ ಇನ್ನೂ ಎರಡು ದಿನ ಎಸ್‌ಐಟಿ ಕಸ್ಟಡಿಗೆ
Published on

ಹಾಸನ: ಪೆನ್‌ಡ್ರೈವ್ ವಿಡಿಯೋ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರನ್ನು ಇನ್ನೆರಡು ದಿನ ಎಸ್‌ಐಟಿ ವಶಕ್ಕೆ ನೀಡಿ ಹಾಸನದ ಐದನೇ ಅಧಿಕ ಸಿವಿಲ್ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.
ದೇವರಾಜೇಗೌಡರನ್ನು ಶುಕ್ರವಾರ ಎಸ್‌ಐಟಿ ಧಿಕಾರಿಗಳು ಕಸ್ಟಡಿಗೆ ಪಡೆದಿದರ‌್ದು ಶನಿವಾರ ಕೋರ್ಟ್‌ಗೆ ಕರೆತಂದಿದ್ದ ಎಸ್‌ಐಟಿ ತಂಡ ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ಇನ್ನೂ ಎರಡು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.ಇದಕ್ಕೆ ಪುರಸ್ಕರಿಸಿದ ನ್ಯಾಯಾಧೀಶರು ದೇವರಾಜೇಗೌಡರನ್ನು ಮೇ.20ರ ಸಂಜೆ 5 ಗಂಟೆಯವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿದರು.
ಶುಕ್ರವಾರ ಕೋರ್ಟ್‌ನಿಂದ ಹೊರ ಬರುವ ವೇಳೆ ಸರ್ಕಾರದ ವಿರುದ್ಧ ದೇವರಾಜೇಗೌಡ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಕೋರ್ಟ್ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net