

ಕಲಬುರಗಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದ ಮಹಾನ್ ನಾಯಕ ದೇವರಾಜ ಅರಸು ಅವರ ಜಯಂತ್ಯುತ್ಸವ ಆ.೨೦ರಂದು ನಗರದಲ್ಲಿ ಅದ್ದೂರಿಯಾಗಿ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕುಮಾರ ಕೆ.ಯಾದವ ಗೊಲ್ಲ ಮನವಿ ಮಾಡಿದರು.
ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಆ.೨೦ರಂದು ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮುನ್ನ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ರಂಗಮAದಿರದವರೆಗೆ ಡೊಳ್ಳು ಕುಣಿತ, ಬಂಜಾರ ನೃತ್ಯ, ಹಲಗೆ, ಗೋಂದಳಿ ಭಜನೆ, ಕಟಬು ಪರಿಕರಗಳ ಪ್ರದರ್ಶನ, ದುರ್ಗಿ ಮುರ್ಗಿ ನೃತ್ಯ, ಸಿಕ್ಕಲಿಕರ ತಂಡ, ಸವಿತಾ ತಂಡ ಸೇರಿ ಎಲ್ಲ ಸಮುದಾಯಗಳ ಕಲಾ ಪ್ರದರ್ಶನ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ಜನರು ಪಾಲ್ಗೊಳ್ಳಬೇಕು ಎಂದರು.
ಪ್ರಮುಖ ವಿನೋದಕುಮಾರ ಜನವರಿ ಮಾತನಾಡಿ, ಅರಸು ಜಯಂತಿ ಆಚರಣೆಯಲ್ಲಿ ಜಿಲ್ಲಾಡಳಿತ ಪ್ರಮುಖ ಹಿರಿಯ ಹೋರಾಟಗಾರರು, ಸಂಘಟಿತರನ್ನು ಕಡೆಗಣಿಸಿ, ಇತ್ತೀಚೆಗೆ ಬಂದವರಿಗೆ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಮುಖರಾದ ಪಿಡ್ಡಪ್ಪ ಜಾಲಗಾರ, ಸೈಬಣ್ಣ ಹೇಳವರ್, ಚಂದ್ರಶೇಖರ ಗೊಂದಲಿ, ಅರುಣಕುಮಾರ ಕಟಬು, ಮಲ್ಲೇಶ ಯಾದವ, ಸ್ವಾಮಿ ದುರ್ಗಾ ಮುರ್ಗಾ, ಮಹೆಬೂಬ್ ಷಾ, ಜಗತ್‌ಸಿಂಗ್ ಇತರರಿದ್ದರು.