

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಈ ರಾಷ್ಟ್ರ ಕಂಡ ಅಪ್ರತಿಮ ಮುತ್ಸದ್ದಿ ರಾಜಕಾರಣಿಯಾಗಿದ್ದರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಲ್ಲಾಡಳಿತ,ಜಿಪಂ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ತ ರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಅರಸು ಅವರ 109ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದ ರು.
ಜ್ಯಾತ್ಯತೀತ,ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದ್ದ ಅರಸು,ಸಮಾಜದ ಕಟ್ಟ ಕಡೆ ವ್ಯಕ್ತಿಗೂ ನ್ಯಾಯ ಒದಗಿಸಲು ಹೋರಾಡಿದ್ದರು. ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಯೋಜನೆಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಅವರ ಸುಧಾರಣೆ ನೀತಿಗಳು ಹಿಂದು ಳಿದ ವರ್ಗಗಳ ಸಾಮಾಜಿಕ ಅಭಿವೃದ್ಧಿಗೆ ನೆರವಾಗಿವೆ.
ಎಲ್ಲರ ಪ್ರೀತಿ ವಿಶ್ವಾಸದೊಂದಿಗೆ 2 ಬಾರಿ ಮುಖ್ಯಮಂತ್ರಿಯಾಗಿದ್ದ ಅರಸು ಅವರು,ಭೂ ಸುಧಾರಣೆ ಕಾಯ್ದೆ ಮೂಲಕ ಲಕ್ಷಾಂತರ ಜ ನರಿಗೆ ಭೂ ಒಡೆತನ ಲಭಿಸುವಂತೆ ಮಾಡಿದರು. ಹಾವನೂರು ವರದಿ ಜಾರಿ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸಿ ದರು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಹೆಗ್ಗಳಿಕೆ ಅವರದೆಂದರು.
ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಜನ್ಮದಿನಗಳನ್ನೂ ನಾವಿಂದು ಆಚರಿಸುತ್ತಿ ದ್ದೇವೆ. ವಿದ್ಯಾರ್ಥಿಗಳು ಮಹನೀಯರ ಕುರಿತು ಅಧ್ಯಯನ ಮಾಡಬೇಕೆಂದರು. ಮುಖ್ಯಮಂತ್ರಿ ಸಿದ್ದರಾಮಯ್ಯಕೂಡ ಅರಸು ಮಾ ರ್ಗದಲ್ಲಿ ಸಾಗುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಕಂಕಣ ಬದ್ಧರಾಗಿದ್ದಾರೆ ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ಮಾತನಾಡಿ,ರಾಜ್ಯದ ಹಿಂದುಳಿದ ವರ್ಗಗಳು ಸಾಮಾಜಿಕ,ಶೈಕ್ಷಣಿಕ ಹಾಗೂ ರಾಜಕೀಯ ಮುನ್ನಲೆಗೆ ಬರಲು ಅರಸು ಕಾರಣ. ರಾಜ್ಯದಲ್ಲಿ ಉಳುವವನೇ ಭೂ ಒಡೆಯ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿದರು ಎಂದರು.
ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಮೋಹನ್‌ಚಂದ್ರಗುತ್ತಿ ಅವರು ಉಪನ್ಯಾಸ ನೀಡಿದರು. ಅರಸು ಮೌನ ಕ್ರಾಂತಿ ಹರಿಕಾರ,ಹಾಸ್ಟೆಲ್‌ಗಳ ಆರಂಭ. ಮಲ ಹೊರುವ ಪದ್ಧತಿ ನಿಷೇಧ,ಜೀತ ಜೀತ ಪದ್ಧತಿ ನಿರ್ಮೂಲನೆ,ರಿಯಾಯಿತಿ ದರದ ಬಸ್ ಪಾಸ್,ನ್ಯಾಯಬೆಲೆ ಅಂಗಡಿಗಳ ಸ್ಥಾಪನೆ ಅರಸು ಅವರ ಕೊಡುಗೆಗಳಾಗಿವೆ ಎಂದರು.
ಶುದ್ಧ ಹಸ್ತ ರಾಜಕಾರಣಿಯಾಗಿದ್ದ ಅರಸು, ಅಧಿ ಕಾರವನ್ನು ಎಂದಿಗೂ ದುರಪಯೋಗ ಪಡಿಸಿಕೊಂಡು ಹಣ ಸಂಪಾದಿಸಲಿಲ್ಲ.ಅವ ರು ನಿಧನ ಹೊಂದಿದ ಸಂದರ್ಭದಲ್ಲಿ ಆಸ್ಪತ್ರೆ ಬಿಲ್ ಪಾವತಿಗೆ ಅವರ ಕುಟುಂಬ ವರ್ಗದವರಲ್ಲಿ ಹಣ ಇರಲಿಲ್ಲವೆಂದರು.
ಅದ್ದೂರಿ ಮೆರವಣಿಗೆ
ಅರಸು ಅವರ ಭಾವಚಿತ್ರದ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ನೀಲಕಂಠೇಶ್ವರ ದೇವಾಲಯ ಬಳಿ ಬಿಸಿಎಂ ಜಿ ಲ್ಲಾ ಅಧಿಕಾರಿ ಡಾ.ಆರ್.ಸುಬ್ರಾನಾಯಕ್ ಮೆರವಣಿಗೆಗೆ ಚಾಲನೆ ನೀಡಿದರು. ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಕುಣಿ ದು ಕುಪ್ಪಳಿಸಿದರು. ಗಾಂಧಿವೃತ್ತ, ಎಸ್‌ಬಿಐ ವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಮೆರವಣಿಗೆ ತರಾಸು ರಂಗಮಂದಿರ ತ ಲುಪಿತು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ಜಿ.ಪಂ.ಉಪಕಾರ್ಯದರ್ಶಿ ಕೆ.ತಿಮ್ಮಪ್ಪ,ಗ್ಯಾರಂಟಿ ಯೋ ಜನೆ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಣ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಸಿ.ಮಧುಸೂಧನ್,ಡಿವೈಎಸ್‌ಪಿ ಪಿ.ಕೆ.ದಿನಕರ್ ಮತ್ತಿತರರು ಇದ್ದರು.
(ಸಿಟಿಡಿ 20 ದೇವರಾಜ ಅರಸು)
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸ ಚಿವ ಡಿ.ಸುಧಾಕರ್ ಉದ್ಘಾಟಿಸಿದರು. ಎಂ.ಕೆ.ತಾಜ್‌ಪೀರ್,ಶಿವಣ್ಣ, ಎಸ್.ಜೆ.ಕುಮಾರಸ್ವಾಮಿ, ಕೆ.ತಿಮ್ಮಪ್ಪ,ಕೆ.ಸಿ.ಮಧುಸೂದನ್,ಪಿ.ಕೆ.ದಿ ನಕರ್,ಸುಬ್ರನಾಯಕ ಮತ್ತಿತರರು ಇದ್ದರು.
(ಸಿಟಿಡಿ 20 ಅರಸು-ಮೆರವಣಿಗೆ)
ದೇವರಾಜ ಅರಸು ಅವರ ಜನ್ಮ ದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಮಂಗಳವಾರ ಅರಸು ಅವರ ಭಾವಚಿತ್ರದ ಅದ್ದೂರಿ ಮೆರವ ಣಿಗೆ ಜರುಗಿತು.