

ನಂಜನಗೂಡು: ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಂಜಪ್ಪ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಜರುಗಿದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಂಜಪ್ಪ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು. ಇದರಿಂದ ಚುನಾವಣಾಧಿಕಾರಿಯಾಗಿದ್ದ ಮೀನುಗಾರಿಕೆ ಇಲಾಖೆ ಸಹಾಯಕಿ ನಿರ್ದೇಶಕ ಶಿಲ್ಪಾ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಗ್ರಾಪ್ರಂ ಅಧ್ಯಕ್ಷೆ ಸೌಭಾಗ್ಯ ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡರಾದ ರಘು, ಸುರೇಶ್, ಮಂಜು, ನಾರಾಯಣ, ಶಿವಣ್ಣ, ರಾಜೇಶ್, ಸದಸ್ಯರಾದ ಮಂಗಳಮ್ಮ, ಶೋಭಾ, ಮುದ್ದುಮಾದ ಶೆಟ್ಟಿ, ದೊಡ್ಡಮ್ಮ, ಮಹದೇವಸ್ವಾಮಿ, ಕಲ್ಲಂಗಡಿ ರಾಘು, ಬಸವ, ನಾರಾಯಣ, ಶಿವು, ಜಯಮ್ಮ ಕಾಳಪ್ಪ, ವಿಮಲಾ ಸೋಮಣ್ಣ, ಗೀತಾ, ವಿಜಯಲಕ್ಷ್ಮೀ, ಮನಿಯಮ್ಮ, ಶಿವಲಿಂಗ, ಶಿವಲಿಂಗಗೌಡ, ಪ್ರೇಮಮ್ಮ, ಸುಮತಿ ಇತರರು ಇದ್ದರು.