ದೇವರಲ್ಲಿ ಭಕ್ತಿ, ಧರ್ಮದಲ್ಲಿ ನಂಬಿಕೆ ಇರಲಿ

020103
Published on

ಮಾಂಜರಿ: ದೇವರಲ್ಲಿ ಭಕ್ತಿ, ಧರ್ಮದಲ್ಲಿ ನಂಬಿಕೆ ಇರಬೇಕು. ಧರ್ಮದಿಂದ ಮನಸ್ಸಿಗೆ ನೆಮ್ಮದಿ, ಯಶಸ್ಸು ಸಿಗಲಿದೆ ಎಂದು ಶ್ರೀಶೈಲ್ ಪೀಠದ ಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಸಮೀಪದ ಯಡೂರು ಬಳಿಯ ಕೃಷ್ಣಾ ಮತ್ತು ದೂಧಗಂಗಾ ನದಿ ಸಂಗಮ ತೀರದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ನಿಮಿತ್ತ ಸ್ನಾನ ಮಾಡಿ ಬಳಿಕ ಧರ್ಮಸಭೆಯಲ್ಲಿ ಮಾತನಾಡಿ, ನಮ್ಮ ಕೈಲಾದಷ್ಟು ಮತ್ತೊಬ್ಬರಿಗೆ ನೆರವು ನೀಡಬೇಕು. ಸಂಪಾದಿಸಿದ 100 ರೂಪಾಯಿಯಲ್ಲಿ 1 ರೂಪಾಯಿಯನ್ನು ಧರ್ಮ ಉಳಿಸುತ್ತಿರುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠಗಳು ಉಳಿಯಲು ಸಾಧ್ಯ ಎಂದರು.

ದೇಶದ ಆಸ್ತಿಯಾಗಿರುವ ಧರ್ಮ, ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕೆಲಸ ಮಾಡಬೇಕು. ಅಂದಾಗ ಶಾಂತಿ ನೆಲೆಸಲು ಸಾಧ್ಯ. ಪ್ರಾಚೀನ ಕಾಲದಿಂದಲೂ ಭಾರತ ಸಾಧು, ಸಂತರ, ವೀರರ ನೆಲೆಬೀಡು. ಅಗಾಧ ಶಕ್ತಿ ಅಡಗಿರುವ ಭಾರತದಲ್ಲಿ ನೆಲೆಸಿರುವುದೇ ಪುಣ್ಯ. ಯುವಶಕ್ತಿಯಿಂದ ಮಾತ್ರ ಭವ್ಯ ಭಾರತ ನಿರ್ಮಾಣವಾಗಲಿದೆ.

ದುರದೃಷ್ಟವಶಾತ್ ಇಂದಿನ ಯುವಜನತೆ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ತಿಳಿಯದೇ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಶ್ರೀಶೈಲ ಶ್ರೀಗಳೊಂದಿಗೆ ನೂರಾರು ಭಕ್ತರು ಪಾಲ್ಗೊಂಡು ಮಕರ ಸಂಕ್ರಾಂತಿ ಆಚರಿಸಿದರು. ಅಂಬಿಕಾ ನಗರಶ್ರೀ, ಯಡೂರಿನ ವೇದ ಪಾಠಶಾಲೆಯ ಗುರುಗಳಾದ ಶ್ರೀಶೈಲ ಗುರೂಜಿ, ಅಡವಯ್ಯ ಅರಳಿಕಟ್ಟಿಮಠ, ಮಲ್ಲಪ್ಪ ಸಿಂಧೂರ, ರಾಹುಲ ಸ್ವಾಮಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net