ದೇವರ ಸಾಮಿಪ್ಯಕ್ಕೆ ಗುರುವಿನ ಕೃಪೆ ಅಗತ್ಯ

h8-Jain 1
Published on

ಹುಬ್ಬಳ್ಳಿ: ಹೋಲಿ ಚಾತುರ್ವಸ್ಯ ನಿಮಿತ್ತ ಜೈನ ಸಮಾಜದ ವತಿಯಿಂದ ನಗರದ ರಾಯ್ಕರ್ ಗೆಸ್ಟ್ ಹೌಸ್ ಆವರಣದಲ್ಲಿ ಭಾನುವಾರ ಧರ್ಮ ಸಭೆ ಏರ್ಪಡಿಸಲಾಗಿತ್ತು.

ರಾಷ್ಟ್ರ ಸಂತ ಗುರುದೇವ ಶ್ರೀ ನರೇಶ ಮುನಿ ಮಾತನಾಡಿ, ದೇವರ ಸಾಮಿಪ್ಯ ತಲುಪಲು ಗುರುಗಳ ಆಶೀರ್ವಾದ ಶಿಷ್ಯಗೆ ಅತ್ಯಗತ್ಯ. ಗುರು ಶಿಷ್ಯ ಪರಂಪರೆ ಭಾರತದಲ್ಲಿ ಅವ್ಯಾಹತವಾಗಿ ಹರಿದುಬಂದಿದೆ. ಶಿಷ್ಯನಿಗೆ ಗುರುವಿನ ಬಗ್ಗೆ ಅಪಾರ ಗೌರವ, ಪ್ರೀತಿ ಇರಬೇಕು. ಇದು ಆತ ಉನ್ನತ ಸ್ಥಿತಿ ತಲುಪುವುದಲ್ಲದೆ ದೇವರೇ ಆಗಬಲ್ಲ ಎಂದರು.

ಶ್ರೀ ಶಾಲಿಭದ್ರ ಮುನಿ ಮಾತನಾಡಿ, ಸಂತರು, ಶರಣರು ಹೇಳಿದ್ದು ಮಾನವೀಯತೆಯೇ ಧರ್ಮವೆಂದು. ಮಾನವೀಯ ಧರ್ಮವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಸಾಧಿ್ವ ಡಾ. ದರ್ಶನ ಪ್ರಭಾಶ್ರೀ ಸಾನ್ನಿದ್ಯ ವಹಿಸಿದ್ದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಚಾತುರ್ವಸ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net