

ತೆಲಸಂಗ, ಬೆಳಗಾವಿ: ದೇವಸ್ಥಾನಗಳು ಪರಸ್ಪರ ಬಾಂಧವ್ಯ ಬೆಸೆಯುವ ಪವಿತ್ರ ಕೇಂದ್ರಗಳಾಗಿವೆ ಎಂದು ಅರ್ಚಕ ಶ್ರೀಶೈಲ ಪೂಜಾರಿ ಹೇಳಿದರು.
ಹೊನವಾಡ ಗ್ರಾಮದಲ್ಲಿ ಸೋಮವಾರ ಹೊನ್ನಮ್ಮೇಶ್ವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ ಮತ್ತು ಸಂಸ್ಕೃತಿ ಎತ್ತಿ ಹಿಡಿಯಲು ನಾಡಿನ ಮಠ ಮಂದಿರಗಳು ಶ್ರಮಿಸುತ್ತ ಬಂದಿವೆ. ದೇವರ ಮೇಲಿರುವ ನಂಬಿಕೆ ಆಧುನಿಕತೆಯ ಹೆಸರಿನಲ್ಲಿ ಕಡಿಮೆಯಾಗಬಾರದು. ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳಾಗಿವೆ ಎಂದರು.
ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು. ದೇವರು ಎಲ್ಲೆಡೆ ಇದ್ದರೂ ಗುರುತಿಸಲು ನಾವು ವಿಲರಾಗುತ್ತಿದ್ದೇವೆ. ದೇವರಲ್ಲಿರುವ ತಾಳ್ಮೆ ಮತ್ತು ಸಹನೆ ಮನುಷ್ಯರಲ್ಲಿ ಇರಬೇಕಾದ ಅಗತ್ಯವಿದೆ. ಮನುಷ್ಯನಿಗೆ ಧರ್ಮ ಅವಶ್ಯವಾಗಿದೆ ಎಂದು ಹೇಳಿದರು.
ಪಲ್ಲಕ್ಕಿ ಉತ್ಸವ, ಡೊಳ್ಳು ಕುಣಿತ, ಕುಂಭಮೇಳ ಮತ್ತು ಅನ್ನಪ್ರಸಾದ ಸೇವೆ ವಿಜೃಂಭಣೆಯಿಂದ ಜರುಗಿದವು.
ಉಪನ್ಯಾಸಕ ಸುರೇಶ ಸನಗೊಂಡ, ಶಿವು ಪಾರಶೆಟ್ಟಿ, ಮಲ್ಲಪ್ಪ ಯಾದವಾಡ, ರಾಜು ಜಾಬಗೊಂಡ, ಕುಮಾರ ಪಾರಶೆಟ್ಟಿ, ಕೆಂಚಪ್ಪ ಶೆಲ್ಲೆಪ್ಪಗೋಳ, ಲಕ್ಷ್ಮಣ ಕೊಕಟನೂರ, ಆಕಾಶ ಮಾನೆ, ಜಗ್ಗು ಬೆಟಗೇರಿ, ಮಹದೇವ ಸಾವಂತ, ಅಮಿತ ಶಿಂಧೆ, ಅಜಿತ ಹಡಪದ, ಪಿಂಟು ಸಾವಂತ, ಸುರೇಶ ಹಳ್ಳದ, ಹೇಮಂತ ಶೆಲ್ಲೆಪ್ಪಗೋಳ, ಸಿದ್ಧರಾಮ ಯಾದವಾಡ, ಈಶ್ವರ ಪೂಜಾರಿ, ಪರಶುರಾಮ ಪೂಜಾರಿ, ಮಹಾಂತೇಶ ಮೋರೆ, ಆರೀಫ್ ಜಲಾಲ್, ಸುರೇಶ ಸಾವಳಗಿ ಇದ್ದರು.