ದೇವರ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ

HUN-NOV-7-1(DAKSHINESHWARA TEMPLE AT KALKUNIKE)
Published on

ಹುಣಸೂರು: ನಗರದ ಕಲ್ಕುಣಿಕೆ ವೃತ್ತದ ಬಳಿಯ ಶ್ರೀ ದಕ್ಷಿಣೇಶ್ವರ, ಗಣಪತಿ, ಸುಬ್ರಹ್ಮಮಣ್ಯ ಮತ್ತು ನಂದೀಶ್ವರ ದೇವರ ಪ್ರತಿಷ್ಠಾಪನಾ ಮಹೋತ್ಸವವು ನೂರಾರು ಆಸ್ತಿಕರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಸಂಪನ್ನಗೊಂಡಿತು.

ಎಚ್.ಡಿ.ಕೋಟೆಯ ಪುರೋಹಿತ ಆರ್.ಎನ್. ರಘುದೀಕ್ಷಿತ್ ನೇತೃತ್ವದಲ್ಲಿ ಭಾನುವಾರ ಸಂಜೆ ಅಗ್ರತೀರ್ಥ ಸಂಗ್ರಹದ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ಶೈವ ಪುಣ್ಯಾಹ, ರಕ್ಷಾಬಂಧ, ಪಂಚಗವ್ಯ ಪ್ರೋಕ್ಷಣೆ, ಪರ್ಯಗ್ನೀಕರಣ, ಪ್ರಧಾನ ಕಳಶಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮದೊಂದಿಗೆ ಕಳಶಾರೋಹಣ ಸ್ಥಾಪನೆ ಮತ್ತು ದಿಗ್ಬಂಧನ ಕಾರ್ಯದೊಂದಿಗೆ ಮೊದಲ ದಿನದ ಧಾರ್ಮಿಕ ಕಾರ್ಯಗಳು ಪೂರ್ಣಗೊಂಡವು.

ಸೋಮವಾರ ಬೆಳಗ್ಗೆ 6 ಗಂಟೆಗೆ ನ್ಯಾಸಗಳು, ಪ್ರಧಾನ ಹೋಮದೊಂದಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ಆರಂಭಗೊಂಡು, ಅಭಿಷೇಕ, ದೇವರ ಅಲಂಕಾರದೊಂದಿಗೆ ಮಹಾಮಂಗಳಾರತಿ ವೈಭವದಿಂದ ನೆರವೇರಿತು. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಎರಡು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈಶ್ವರ ದೇವಾಲಯ ಟ್ರಸ್ಟ್‌ನ ಸದಸ್ಯರು, ಬಡಾವಣೆಯ ನಾಗರಿಕರು ಮತ್ತು ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net