ದೇವರ ಧ್ಯಾನದಿಂದ ಆನಂದಮಯ ಜೀವನ

1BLK4
ಭಾಲ್ಕಿ ತಾಲೂಕಿನ ಚಳಕಾಪುರದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ. ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಶ್ರೀ ಶಂಕರಾನಂದ ಸ್ವಾಮೀಜಿ, ಮಾತೋಶ್ರೀ ಲಕ್ಷ್ಮೀದೇವಿ ತಾಯಿ, ಇತರರಿದ್ದರು.
Published on

ಭಾಲ್ಕಿ: ಪ್ರತಿಯೊಬ್ಬರೂ ಸುಖವಾಗಿರಬೇಕು ಎನ್ನುವುದಾಗಿದೆ. ಆದರೆ ಸುಖದ ಹಿಂದೆ ದುಃಖ ಇದ್ದೇ ಇರುತ್ತದೆ ಎನ್ನುವುದು ಮರೆತಿದ್ದೇವೆ ಎಂದು ಚಿದಂಬರಾಶ್ರಮ ಬೀದರ್‌ನ ಶ್ರೀ ಸಿದ್ಧಾರೂಢ ಮಠದ ಸದ್ಗುರು ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪ್ರತಿಪಾದಿಸಿದರು.

ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ೧೮೯ನೇ ಜಯಂತಿ ಮಹಾಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಶಿವಾನುಭವ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮನೆಯಲ್ಲಿ ಎಷ್ಟೇ ಜನರಿದ್ದರೂ ಎಲ್ಲರ ಆಸೆ ಒಂದೇ, ಸುಖವಾಗಿರಬೇಕು ಎನ್ನುವುದು. ಸಮಸ್ತ ಜನರ ಇಚ್ಛೆ ಸುಖ, ಶಾಂತಿ, ಸಮಾಧಾನ. ಆನಂದದಿAದ ಜೀವನ ಸಾಗಿಸಬೇಕು ಎಂದರೆ ಸದಾ ದೇವರ ಧ್ಯಾನ ಮಾಡಬೇಕು. ಅದು ಬಿಟ್ಟು ಸಂಸಾರದ ಚಿಂತೆಯಲ್ಲಿ ಬಿದ್ದರೆ ಸುಖ, ಸಾಂತಿ, ಸಮಾಧಾನ ಸಿಗುವುದಿಲ್ಲ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಚಳಕಾಪುರದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠ ಶ್ರೀ ಶಂಕರಾನಂದ ಸ್ವಾಮೀಜಿ ಮಾತನಾಡಿ, ಮಿಥ್ಯ ಅಭಿಮಾನ ಬಿಟ್ಟು, ಸತ್ಯದ ಅಭಿಮಾನ ಹಿಡಿಯಬೇಕು. ಸ್ವ ಅಭಿಮಾನ ಕಳೆದುಕೊಂಡು ಪರಮಾತ್ಮನ ಅಭಿಮಾನ ಹಿಡಿದರೆ ಪರಮ ಮುಕ್ತ ಸಾಧ್ಯ. ಭಗವತ್‌ಪ್ರೇಮ ನಮ್ಮೆಲ್ಲರಲ್ಲಿರಲಿ ಎಂದು ಹೇಳಿದರು.

ಕಲಬುರಗಿಯ ಮಾತೋಶ್ರೀ ಲಕ್ಷ್ಮೀದೇವಿ ತಾಯಿ, ಯರಗಲದ ಸಿದ್ಧಾರೂಢ ಮಠದ ಶ್ರೀ ಅದ್ವೈತಾನಂದ ಸ್ವಾಮೀಜಿ ಮಾತನಾಡಿ ದರು. ಸೊಲ್ಲಾಪುರದ ಶ್ರೀ ಜಡಿಸಿದ್ಧೇಶ್ವರ ಸ್ವಾಮೀಜಿ, ಯಳಸಂಗಿಯ ಶ್ರೀ ಪೂರ್ಣಾನಂದ ಸ್ವಾಮೀಜಿ, ಬೀದರ್‌ನ ಸಿದ್ಧೇಶ್ವರಿ ತಾಯಿ, ಮಲ್ಲಾಪುರದ ಮಾತೋಶ್ರೀ ಆನಂದಮಯಿ ತಾಯಿ, ಸೊಲ್ಲಾಪುರದ ಸುಶಾಂತಾತಾಯಿ, ಶ್ರೀ ಪರಮಾನಂದ ಸ್ವಾಮೀಜಿ ಯಳಸಂಗಿ, ಬೀದರ್‌ನ ಶ್ರೀ ಗಣಪತಿ ಮಹಾರಾಜರು, ಅಮೃತಾನಂದಮಯಿ ಬೆಳ್ಳೂರ ಪ್ರವಚನ ಮಂಡಿಸಿದರು.

ಶ್ರೀ ಸದ್ರೂಪಾನಂದ ಸ್ವಾಮೀಜಿ ಮಳಚಾಪುರ, ಯೋಗೇಶ್ವರಿ ತಾಯಿ ಬುರಣಾಪುರ, ಶ್ರೀ ಸಿದ್ಧಾನಂದ ಸ್ವಾಮೀಜಿ ಬುದ್ನಿ, ರಾಜೇಶ್ವರಿ ತಾಯಿ , ಜ್ಞಾನೇಶ್ವರಿ ತಾಯಿ ಭೀ.ಗುಡಿ, ಗೋಪಾಲ ಶಾಸ್ತ್ರೀ , ಶಿವಾನಂದ ಸ್ವಾಮಿ, ಪ್ರಭುದೇವರು ಸಾಧಕರು, ಗುಂಡಪ್ಪ ಶರಣರು, ಶರಣಾನಂದ ಸ್ವಾಮಿ ಇದ್ದರು. ಶಂಕರಲಿಂಗ ಸ್ವಾಮಿ ಸ್ವಾಗತಿಸಿದರು. ವಿನಾಯಕ ಸಾಧಕರು ನಿರೂಪಣೆ ಮಾಡಿದರು. ಮಾಧವಾನಂದ ಸ್ವಾಮಿ ವಂದಿಸಿದರು. ವೈಜಿನಾಥಪ್ಪ ಧಾಬಶೆಟ್ಟಿ ನಾವದಗಿಯವರಿಂದ ಭಕ್ತಿಸೇವೆ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net